ಬೆಂಗಳೂರು: ವಿಧಾನ ಮಂಡಲದ ಮುಂಗಾರು ಅಧಿವೇಶನದ ಮೊದಲ ದಿನವೇ ಅಕ್ರಮಗಳ ಸದ್ದು ಗದ್ದಲ ಜೋರಾಗಿದ್ದು, ಕೋವಿಡ್ ನಿರ್ವಹಣೆಯಲ್ಲಿ ಆಗಿರುವ ಹಗರಣಗಳ ಬಗ್ಗೆ ಕಾಂಗ್ರೆಸ್ ನಾಯಕ ಯು.ಬಿ ವೆಂಕಟೇಶ್ ಕಿಡಿಕಾರಿದ್ದಾರೆ.
ಶೂನ್ಯ ವೇಳೆಯಲ್ಲಿ ಮಾತನಾಡಿದ ಯು.ಬಿ ವೆಂಕಟೇಶ್, ಬೆಂಗಳೂರಿನಲ್ಲಿ 2021-22ರಲ್ಲಿ ಬಿಜೆಪಿ ಸರ್ಕಾರದ ಇದ್ದಾಗ ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ಅಕ್ರಮವಾಗಿದೆ.
ಔಷಧಿ ಸೇರಿ ಇನ್ನಿತರ ಖರೀದಿಯಲ್ಲಿ ಅಕ್ರಮವಾಗಿದೆ. ಲೆಕ್ಕ ಪರಿಶೋಧನೆ ವರದಿಯಲ್ಲಿ ಅಕ್ರಮದ ಬಗ್ಗೆ ಪ್ರಸ್ತಾಪ ಇದೆ. ಸುಮಾರು 30 ಕೋಟಿ ರೂ. ಅಕ್ರಮದ ಆಗಿದೆ. ಈ ಬಗ್ಗೆ ತನಿಖೆ ಮಾಡಿ ತಪ್ಪು ಮಾಡಿರೋರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಆಗ್ರಹಿಸಿದರು.

