ಬೆಂಗಳೂರು: ಇನ್ನು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಶ್ರೀಲಂಕಾದ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಆತಿಥೇಯ ದೇಶ ಮಾಜಿ ಕ್ರಿಕೆಟಿಗ ಇಯಾನ್ ಬೆಲ್ ನೇಮಕಗೊಂಡಿದ್ದಾರೆ. ತಮ್ಮ ಕಾಲದ ಅತ್ಯಂತ ಸೊಗಸಾದ ಟೆಸ್ಟ್ ಬ್ಯಾಟರ್ಗಳಲ್ಲಿ ಒಬ್ಬರಾದ ಬೆಲ್ ಆಗಸ್ಟ್ 16 ರಂದು ತಂಡದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಲಿದ್ದಾರೆ. ಅವರು ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮುಕ್ತಾಯದವರೆಗೂ ಇರಲಿದ್ದಾರೆ.
ಇಂಗ್ಲೆಂಡ್ನ ಮಾಜಿ ಬ್ಯಾಟರ್ 118 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 42.69 ಸರಾಸರಿಯಲ್ಲಿ 7727 ರನ್ ಗಳಿಸಿದ್ದಾರೆ. ಅವರು 22 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಶ್ರೀಲಂಕಾ ಇತ್ತೀಚೆಗೆ ಭಾರತವನ್ನು 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಸೋಲಿಸಿದೆ. ಮಧ್ಯಂತರ ಮುಖ್ಯ ಕೋಚ್ ಸನತ್ ಜಯಸೂರ್ಯ ಅವರ ಅಡಿಯಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸುವ ಭರವಸೆಯಲ್ಲಿದೆ.

