ಬೆಂಗಳೂರು: ರಾಜ್ಯದೆಲ್ಲೆಡೆ ಭಾರೀ ಮಳೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ಸಿಲಿಕಾನ್​ ಸಿಟಿಗೆ ವರುಣನ ಅಬ್ಬರ ಜೋರಾಗಿದ್ದು, ಇಂದು ರಾಜಧಾನಿಗೆ ಮಳೆರಾಯ ಆಗಮಿಸಿದ್ದು, ದಿಢೀರ್​ ಮಳೆಯಿಂದ ವಾಹನ ಸವಾರರು ರಸ್ತೆ ಮಧ್ಯೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ದಿಢೀರ್​ ಭಾರೀ ಮಳೆಯಿಂದ ಜನರ ಜೀವನ ಅಸ್ತವ್ಯಸ್ತವಾಗಿದ್ದು. ಮಳೆಯಿಂದ ಕಂಗಾಲಾದ ಸಿಲಿಕಾನ್​ ಸಿಟಿ ​ ಸವಾರರಿಗೆ ಸಂಕಷ್ಟ ಎದುರಾಗಿದೆ. ಬನಶಂಕರಿ, ಬಸವನಗುಡಿ, ಜಯನಗರ, ಕೋರಮಂಗಲ, ಕೆಆರ್​ ಮಾರುಕಟ್ಟೆ, ಜೆಸಿ ರಸ್ತೆ, ಮೆಜೆಸ್ಟಿಕ್, ಎಂ.ಜಿ ರೋಡ್​ ಗಿರಿನಗರ, ವಿಜಯನಗರ, ಮಲ್ಲೇಶ್ವರಂ, ಸೌತ್ ಎಂಡ್ ಸರ್ಕಲ್, ಮೆಜೆಸ್ಟಿಕ್​​ ಸೇರಿದಂತೆ ಹಲವು ಕಡೆ ಧಾರಾಕಾರವಾಗಿ ಮಳೆಯಾಗಿದೆ.