ಬೆಂಗಳೂರು: ಕೆಲವು ದಿನಗಳಿಂದ ಆಗಾಗ ಬಂದು ಮರೆಯಾಗುತ್ತಿದ್ದ ಮಳೆರಾಯ ನಿನ್ನೆ ರಾತ್ರಿ ಅಬ್ಬರಿಸಿ ಬೊಬ್ಬೆರಿದ್ದಿದ್ದಾನೆ. ನಗರದ ಕೆ.ಆರ್​.ಮಾರ್ಕೆಟ್, ಜೆ.ಸಿ ರೋಡ್, ವಿಜಯನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಏರಿಯಾಗಳಲ್ಲಿ ಧಾರಾಕಾರ ಮಳೆಯಾಗಿದೆ.

ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಶುರುವಾದ ಮಳೆ, ಎರಡ್ಮೂರು ಗಂಟೆಗಳ ಕಾಲ ಬಿಟ್ಟು ಬಿಡದೇ ಗುಡುಗು ಸಹಿತ ಮಳೆಯಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾಗಿದೆ. ನೀರಿನಲ್ಲಿ ವಾಹನ ಸವಾರರು ಸಂಚರಿಸಲಾಗದೇ ಪರದಾಡುತ್ತಿದ್ದಾರೆ.

ಬೆಳಗ್ಗೆ ಎದ್ದು ವಿವಿಧ ಆಫೀಸ್​ಗಳಿಗೆ ಹೋಗುವ ಉದ್ಯೋಗಿಗಳು ಮಳೆಯಿಂದಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ. ಬೆಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ, ಅಲ್ಲದೇ ಕೆಲವು ಅಪಾರ್ಟ್​ಮೆಂಟ್​ಗಳಲ್ಲೂ ನೀರು ನುಗ್ಗಿದೆ. ಜನರಿಗೆ ಭಾರೀ ತೊಂದರೆ ಆಗಿದೆ.