ಬೆಂಗಳೂರು: ನಾದಬ್ರಹ್ಮ ಹಂಸಲೇಖ ಅವರು ಕಾರ್ಯಕ್ರಮವೊಂದರಲ್ಲಿ ಆಡಿರುವ ಒಂದು ಮಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಬ್ರಾಹ್ಮಣ ಸಮುದಾಯದ ಕುರಿತು ಹಂಸಲೇಖ ಅವರ ಆ ಒಂದು ಮಾತಿಗೆ ಹಲವು ಆಕ್ಷೇಪ ವ್ಯಕ್ತಪಡಿಸಿ ತಮ್ಮ ಬೇಸರವನ್ನು ಹೊರ ಹಾಕುತ್ತಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಹಂಸಲೇಖ ಅವರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ಕನ್ನಡದ ಪ್ರಾದೇಶಿಕ ಪಕ್ಷ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲೂ ಭಗವದ್ಗೀತೆ ಜೊತೆಗೆ ಆರ್ ಎಸ್ ಎಸ್ ನ ಚಿಂತನ ಗಂಗಾ ಪುಸ್ತಕ ಇರುತ್ತೆ. 40 ವರ್ಷದ ಹಿಂದೆ ನಾನು ಚಿಂತನ ಗಂಗಾ ಪುಸ್ತಕ ದ್ದೆ, ಅದು ಆರ್ ಎಸ್ ಎಸ್ ಅವರ ಸಂವಿಧಾನ. ಆ ಪುಸ್ತಕ ಎಷ್ಟು ಕೆಲಸ ಮಾಡುತ್ತೆ ಎಂದರೇ, ರಾಷ್ಟ್ರದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ವಿರುದ್ಧದವಾದ ಪ್ರತಿದಾಳಿ ಹೇಗೆ ಮಾಡಬೇಕು ಅಂತ ಆ ಚಿಂತನಾ ಗಂಗಾ ಮೂಲಕ ಮೆಸೇಜ್ ಕಳುಹಿಸುತ್ತಾರೆ, ಅದು ಬೇರೆ ವಿಚಾರ ಬಿಡಿ ಎಂದು ಹೇಳಿದ್ದಾರೆ.
ಕನ್ನಡದ ಹೆಸರಲ್ಲಿ ಬ್ರಾಹ್ಮಣರ ವಿರುದ್ಧ ದ್ವೇಷ ಸಾರುವ ಪಕ್ಷ!
ಹೌದು! ಕನ್ನಡದ ಬಗ್ಗೆ ಮಾತಾಡ್ತಿವಿ ಅಂತ ಜನರನ್ನ ಮಂಗ ಮಾಡಿ, ದೇವರ ಪೂಜೆ ಮಾಡೋ ಪೂಜಾರಿಗಳ ಮೇಲೆ ವಿಷ ಬಿತ್ತುವ ಕೆಲಸ ಮಾಡ್ತಿದ್ದಾರೆ.
ಇವರಿಗೆ ಕನ್ನಡದ ಮೇಲೆ ಪ್ರೀತಿ ಅಲ್ಲ, ಬ್ರಾಹ್ಮಣರ ಮೇಲೆ ದ್ವೇಷ ಅಷ್ಟೆ!
ಹುಚ್ಚಾಸ್ಪತ್ರೆಲಿ ಇರಬೇಕಾದ ಹಂಸಲೇಖ ಇವರ ಗುರು🤣 pic.twitter.com/T4ZAHNOSBB
— Homelander (Kannadiga) (@sir_homelander) August 27, 2024
ಕನ್ನಡದ ಪಕ್ಷ ಕಟ್ಟುವವರಿಗೂ ಅಂತಹ ಒಂದು ಮಾರ್ಗಸೂಚಿಯ ಅವಶ್ಯಕತೆ ಇದೆ. ಅದು ಚಿಂತನ ಗಂಗಾದಂತಿರದೆ ನಾಡನ್ನ ಕಟ್ಟುವಂತೆ ಇರ್ಬೇಕು. ಪ್ರತಿ ಕನ್ನಡಿಗ ಸಂವಿಧಾನದ ಜೊತೆ ಕನ್ನಡದ ಠರಾವನ್ನು ಇರಿಸಿಕೊಳ್ಳಬೇಕು ಎಂದು ಹಂಸಲೇಖ ಈ ವಿಡಿಯೋದಲ್ಲಿ ಹೇಳಿರುವುದನ್ನು ನೋಡಬಹುದು.
ಬೆಂಗಳೂರಿನ ಬಸವ ಭವನದಲ್ಲಿ ಆಯೋಜಿಸಿದ್ದ ನಮ್ಮ ನಾಡು ನಮ್ಮ ಆಳ್ವಿಕೆ ಎಂಬ ಚಿಂತನಾ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಹಂಸಲೇಖ ಅವರು ಮಾತನಾಡಿದ್ದು, ಈ ವೇಳೆ ಮೇಲಿನ ಮಾತುಗಳನ್ನು ಹೇಳಿದ್ದಾರೆ. ಹಂಸಲೇಖ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧದವೂ ವ್ಯಂಗ್ಯವಾಡಿರುವ ಹಂಸಲೇಖ ಅವರು, ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದು ಸಂಸತ್ ಪ್ರವೇಶ ಮಾಡುವ ಸಂದರ್ಭದಲ್ಲಿ ಸಂಸರ್ ಭವನಕ್ಕೆ ನಮಸ್ಕರಿಸಿ ಮೋದಿ ಪ್ರವೇಶಿಸಿದ್ದರು. ಆಗ ಈ ವ್ಯಕ್ತಿಗೆ ಎಷ್ಟು ವಿನಮ್ರತೆ ಇದೆ ಅಂತ ಅಂದುಕೊಂಡಿದ್ದೆ. ಆದರೆ ಕೇರಳದ ಸೌಂಡ್ ಎಂಜಿನಿಯರ್ ಓರ್ವ ಇದು ಬರಿ ನಾಟಕ ಎಷ್ಟೇ ಎಂದಿದ್ದ. ಸಂಸತ್ ಭವನಕ್ಕೆ ಸಮಸ್ಕರಿಸಿದ್ದ ಮೋದಿ ಸಂಸತ್ ಭವನವನ್ನೇ ಬಲಿಸಿದ್ದಾರೆ. ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿದ್ದರು, ಆದ್ದರಿಂದ ಸಂವಿಧಾನವನ್ನೇ ಬದಲಿಸಬಹುದಾಗಿದೆ. ಆದ್ದರಿಂದ ಕನ್ನಡಿಗರು ಎಚ್ಚರಿಕೆ ಇಂದ ಇರ್ಬೇಕು ಅಂತ ಹಂಸಲೇಖ ಹೇಳಿದ್ದಾರೆ.
ಅಂದು ಸಂಸತ್ ಭವನಕ್ಕೆ ನಮಸ್ಕರಿಸಿ ಸಂಸತ್ ಭವನವನ್ನೇ ಬದಲಾಯಿಸಿದ್ದ ಮೋದಿ ಇಂದು ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಮುಂದೇನು ಕಥೆ?
ಹಂಸಲೇಖ 🔥
ಖ್ಯಾತ ಸಂಗೀತ ನಿರ್ದೇಶಕ pic.twitter.com/KNgvBmHXqi
— Goudrusarkar – ಗೌಡ್ರುಸರ್ಕಾರ್ (@Gs_0107) August 27, 2024

