ಬೆಂಗಳೂರು: ರಾಜ್ಯ ಸರ್ಕಾರ ಕಳೆದ ದಿನ (ಆಗಸ್ಟ್​ 27) ಪ್ರೀಮಿಯಂ ವಿಸ್ಕಿ, ಸ್ಕಾಚ್​ಗಳ ದರವನ್ನು ಕಡಿಮೆ ಮಾಡಲು ಮುಂದಾಗಿದೆ. ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಸ್ಕಾಚ್ ಗಳದರ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗ್ತಿದೆ. ಮದ್ಯದಲ್ಲಿ 16 ಸ್ಲ್ಯಾಬ್​ಗಳಿವೆ. ಅದರಲ್ಲಿ ಒಂದರಿಂದ ಐದು ಸ್ಲ್ಯಾಬ್​ಗಳ ವರೆಗೆ ಮದ್ಯದ ದರವನ್ನು ಕಡಿಮೆ ಮಾಡಿಲ್ಲ. ಅದು ಬಡ ವರ್ಗದ ಮದ್ಯಪ್ರಿಯರು ಕುಡಿಯುವ ಮದ್ಯ. 60% ರಷ್ಟು ಮದ್ಯಪ್ರಿಯರು ಈ ವರ್ಗದ ಮದ್ಯವನ್ನು ಕುಡಿಯುತ್ತಾರೆ. 6 ರಿಂದ 18 ರವರೆಗೆ ಮಧ್ಯಮವರ್ಗ, ಶ್ರೀಮಂತ ಮತ್ತು ಅತಿ ಶ್ರೀಮಂತ ವರ್ಗ ಕುಡಿಯುತ್ತಾರೆ. ಪ್ರೀಮಿಯಂ ಮದ್ಯವನ್ನು ರಾಜ್ಯದಲ್ಲಿ ಶೇ- 40% ರಷ್ಟು ಮದ್ಯಪ್ರಿಯರು ಕುಡಿಯುತ್ತಾರೆ. ಆರರಿಂದ ಹದಿನಾರರವರೆಗೆ ಬರುವ ಎಲ್ಲಾ ಮಾದರಿಯ ಮದ್ಯದ ದರವನ್ನು ಕಡಿಮೆ ಮಾಡಲಾಗ್ತಿದೆ.

ಈ ಹಿಂದೆ 2,500 ರಿಂದ 3 ಸಾವಿರ ರುಪಾಯಿ ಬೆಲೆ ಇರುವ ಒಂದು ಫುಲ್ ಬಾಟಲ್ ಪ್ರೀಮಿಯಂ ವಿಸ್ಕಿ ಬೆಲೆ ನಿನ್ನೆಯಿಂದ 600 ರಿಂದ 800 ರುಪಾಯಿ ವರೆಗೆ ಕಡಿಮೆ ಆಗಿದೆ. ಐದು ಸಾವಿರದಿಂದ ಎಂಟು ಸಾವಿರ ರುಪಾಯಿ ವರೆಗೆ ಇದ್ದ ಒಂದು ಫುಲ್ ಬಾಟಲ್ ಸ್ಕಾಚ್ ನ‌ ಮೇಲೆ ಒಂದು ಸಾವಿರ ರುಪಾಯಿ ವರೆಗೆ ಕಡಿಮೆ ಆಗಿದೆ. ಸ್ಕಾಚ್ ಗಳ ಮೇಲೆ ಶೇ 20 ರಿಂದ 25% ರಷ್ಟು ಕಡಿಮೆ ಆಗಿದೆ ಎಂದು ಬೆಂಗಳೂರು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಕರುಣಾಕರ ಹೆಗ್ಡೆ ತಿಳಿಸಿದರು.

ಇನ್ನೂ ಇತ್ತ ರಾಜ್ಯ ‌ಸರ್ಕಾರ ಕ್ಲಾಸ್ ಪೀಪಲ್ಸ್ ಕುಡಿಯುವ ಮದ್ಯದ ದರವನ್ನು ಇಳಿಕೆ ಮಾಡಿದ್ರೆ ಇತ್ತ ನಾರ್ಮಲ್ ಜನರು ಕುಡಿಯುವ ಪ್ರತಿ ಬಿಯರ್ ಮೇಲೆ 5 ರಿಂದ 30 ರುಪಾಯಿ ವರೆಗೂ ಹೆಚ್ಚಳ ಮಾಡಿದೆ. ಈ ಹಿಂದೆ 100 ರುಪಾಯಿ ಇದ್ದ ಬಿಯರ್ ಈಗ 120 ರುಪಾಯಿ. 120 ರುಪಾಯಿ ಇದ್ದ ಬಿಯರ್ 150 ರುಪಾಯಿ. 130 ರುಪಾಯಿ ಇದ್ದ ಬಿಯರ್ ಬೆಲೆ 150 ರುಪಾಯಿ ವರೆಗೆ ಏರಿಕೆ ಮಾಡಲಾಗಿದೆ.