ಬೆಂಗಳೂರು: ಥಣಿಸಂದ್ರದ ಗ್ಯಾರೇಜ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 20ಕ್ಕೂ ಹೆಚ್ಚು ಕಾರುಗಳು ಹಾಗೂ 8 ಆಟೋಗಳು ಸುಟ್ಟು ಕರಕಲಾಗಿವೆ.

ಥಣಿಸಂದ್ರ ಮುಖ್ಯರಸ್ತೆಯ ಭಾರತೀಯ ಸಿಟಿ ಬಳಿ ಇರುವ ಗ್ಯಾರೇಜ್‌ನಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಸಣ್ಣಪುಟ್ಟ ರಿಪೇರಿಗೆ ತಂದಿದ್ದ 20ಕ್ಕೂ ಹೆಚ್ಚು ಕಾರುಗಳು ಸುತ್ತು ಕರಕಲಾಗಿವೆ. ಜಾಗ್ವಾರ್, ರೇಂಜ್ ರೋವರ್ ಕಾರುಗಳಿಗೆ ಹಾನಿಯಾಗಿದೆ.

ಗ್ಯಾರೇಜ್‌ನಿಂದ ಪಕ್ಕದ ಶೆಡ್‌ಗೂ ಬೆಂಕಿ ತಗುಲಿದೆ, ಅಲ್ಲಿ ನಿಲ್ಲಿಸಿದ್ದ ಸುಮಾರು 8 ಆಟೋಗಳು ಅಗ್ನಿಗೆ ಆಹುತಿಯಾಗಿವೆ. ಯಾವುದೋ ಕಾರು ಗ್ಯಾರೇಜ್ ಸಮೀಪದ ಯುಪಿವಿಸಿ ಕಿಟಕಿ ಫ್ಯಾಕ್ಟರಿಗೂ ಬೆಂಕಿ ತಗುಲಿದೆ.

ಇದರಿಂದ ಫ್ಯಾಕ್ಟರಿಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಗ್ರಾಹಕರು ಕಿಟಕಿ ವಸ್ತುಗಳು, ಹಾಗೂ 4 ಲಕ್ಷ ರೂ. ಮೌಲ್ಯದ ಫ್ಯಾಕ್ಟರಿ ಯಂತ್ರಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.