ಬೆಂಗಳೂರು : ಚಿನ್ನ ಮಾರಾಟ ಮಾಡಿ ಹಣ ಕೊಡೋದಾಗಿ ವಂಚನೆ ನಡೆಸಿದ ಪ್ರಕರಣವೊಂದರಲ್ಲಿ ಹಲಸೂರು ಗೇಟ್ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನವಾಗಿದೆ.

ಜೀರನ್ ಸಕಾರಿಯಾ ಮತ್ತು ರಾಜೇಂದ್ರ ಸಕಾರಿಯಾ ಬಂಧಿತರು. ಬಂಧಿತರಿಂದ 1.60 ಕೋಟಿ ಮೌಲ್ಯದ 1300 ಗ್ರಾಂ ಚಿನ್ನದ ಗಟ್ಟಿ ವಶಕ್ಕೆ ಪಡೆಯಲಾಗಿದೆ. ಹರ್ಷಿತ್.ಬಿ ಎಂಬುವವರಿಗೆ ವಂಚನೆ ಮಾಡಿದ್ದ ಆರೋಪಿಗಳು ಈ ಹಿಂದೆ ಅವರೊಡನೆಯೇ ಒಟ್ಟಿಗೇ ವ್ಯವಹಾರ ಮಾಡಿಕೊಂಡಿದ್ದರು.

ಹರ್ಷಿತ್ ಬಳಿಯಿಂದ ಚಿನ್ನದ ಗಟ್ಟಿ ಪಡೆದುಕೊಂಡಿದ್ದ ಆರೋಪಿಗಳು , ಅದನ್ನು ಮಾರಾಟ ಮಾಡಿ ಹಣ ಕೊಡೋದಾಗಿ ನಂಬಿಸಿದ್ದರು. ಕಳೆದ ಮೂರು ತಿಂಗಳ ಹಿಂದೆ ಚಿನ್ನ ಪಡೆದಿದ್ದ ಆಸಾಮಿಗಳು, ಮೂರು ತಿಂಗಳಿಂದ ಹಣ, ಚಿನ್ನ ಕೇಳಿದ್ರು ನೀಡದೆ ಸತಾಯಿಸುತ್ತಿದ್ದರು.

ಇದರಿಂದ ಬೇಸತ್ತು ಹೋಗಿದ್ದ ಹರ್ಷಿತ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹರ್ಷಿತ್‌ ನೀಡಿದ್ದ ದೂರನ್ನಾಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.