ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಅನಿಲ ಸೋರಿಕೆಯಾಗಿ ಪಾನಿಪುರಿ ಅಂಗಡಿಯೊಂದು ಅಗ್ನಿ ಅವಗಢದಿಂದ ಹೊತ್ತಿ ಉರಿದಿದೆ.

ಮಂಡ್ದ ಗಿರೀಶ್ ಅವರು ಬಂಗಾರಪೇಟೆ ಚಾಟ್ಸ್‌ ಹೆಸರಿನಲ್ಲಿ ಪಾನಿಪುರಿ ಅಂಗಡಿ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಗ್ಯಾಸ್ ಸ್ಟೋವ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತುಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಜ್ವಾಲೆ ಇಡೀ ಅಂಗಡಿ ಆವರಿಸಿಕೊಂಡು ಕೆನ್ನಾಲಿಗೆ ಚಾಚಿದೆ.

ಲೆಕ್ಟ್ರಾನಿಕ್‌ಸಿಟಿಯ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.