ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್​ನ್ನು ಘೋಷಣೆ ಮಾಡಿದೆ. ಈ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯದೊಂದಿಗೆ ಹುಬ್ಬಳ್ಳಿ, ಧಾರವಾಡ, ಹಾವೇರಿ, ಚಿಕ್ಕೋಡಿ, ಬೆಳಗಾವಿ, ಗದಗ ವಿಭಾಗಗಳಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಲಾಗಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್​ಗಾಗಿ http://ksrtc.in ಗೆ ಭೇಟಿ ನೀಡಬಹುದಾಗಿದೆ.

ಹುಬ್ಬಳ್ಳಿ, ಧಾರವಾಡ, ಹಾವೇರಿ, ಚಿಕ್ಕೋಡಿ, ಬೆಳಗಾವಿ, ಗದಗ ವಿಭಾಗಗಳಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ #nwkrtc ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್ ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ https://t.co/P8O6ADJWvu ಗೆ ಭೇಟಿ ನೀಡಿ. pic.twitter.com/iedqa0iawE — North Western Karnataka Road Transport Corporation (@nw_krtc) July 20, 2024

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಹುಬ್ಬಳ್ಳಿ-ಜೋಗ ಫಾಲ್ಸ್​​ಗೆ 8ಗಂಟೆಗೆ ಐರಾವತ್ ಬಸ್​ ಹೊರಡಲಿದ್ದು, (ಹೋಗಿ ಬರುವುದಕ್ಕೆ) 600 ರೂ ಪ್ರಯಾಣ ದರ ನಿಗದಿಸಲಾಗಿದೆ. 7:30 ಗಂಟೆಗೆ ರಾಜಹಂಸ ಬಸ್​ ಹೊರಡಲಿದ್ದು (ಹೋಗಿ ಬರುವುದಕ್ಕೆ) 430 ರೂ. ದರ ನಿಗದಿಯಾಗಿದೆ. 8:10ಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು (ಹೋಗಿ ಬರುವುದಕ್ಕೆ) 350 ರೂ. ದರವಿದೆ.

ಧಾರವಾಡ ವಿಭಾಗದಿಂದ ಧಾರವಾಡ-ದಾಂಡೇಲಿಗೆ 7:30 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 340 ರೂ. ಹಾಗೂ ಧಾರವಾಡ-ಗೋಕಾಕ ಫಾಲ್ಸ್​​​ಗೆ 7:30 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 375 ರೂ. ದರ ನಿಗದಿಪಡಿಸಲಾಗಿದೆ.

ಹಾವೇರಿ ವಿಭಾಗದಿಂದ ಹಾವೇರಿ- ಜೋಗ ಫಾಲ್ಸ್​​ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 340 ರೂ. ಹಾಗೂ ರಾಣೇಬೆನ್ನೂರು-ಜೋಗ ಫಾಲ್ಸ್​​ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 320 ರೂ ದರ ನಿಗದಿಸಲಾಗಿದೆ.

ಚಿಕ್ಕೋಡಿ ವಿಭಾಗದಿಂದ ಚಿಕ್ಕೋಡಿ-ಗೋಗಾಕ ಫಾಲ್ಸ್​ಗೆ 9 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 220 ರೂ ಹಾಗೂ ಸಂಕೇಶ್ವರ-ಗೋಗಾಕ ಫಾಲ್ಸ್​ಗೆ 9:30ಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು, 160 ರೂ ಮತ್ತು ನಿಪ್ಪಾಣಿ- ಗೋಗಾಕ ಫಾಲ್ಸ್​ಗೆ ವಾಯವ್ಯ ಕರ್ನಾಟಕ ಸಾರಿಗೆ ಬಸ್​ ಹೊರಡಲಿದ್ದು, 220 ರೂ ಪ್ರಯಾಣ ದರವಿರಲಿದೆ.

ಬೆಳಗಾವಿ ವಿಭಾಗದಿಂದ ಬೆಳಗಾವಿ-ಗೋಗಾಕ ಫಾಲ್ಸ್​ಗೆ 9 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 190 ರೂ ದರ ನಿಗದಿಸಲಾಗಿದೆ.

ಗದಗ ವಿಭಾಗದಿಂದ ಗದಗ-ಜೋಗ ಫಾಲ್ಸ್​ಗೆ 7 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 500 ರೂ ಹಾಗೂ ಗದಗ-ಗೋಕಾಕ ಫಾಲ್ಸ್​ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 340 ರೂ. ನಿಗದಿಸಲಾಗಿದೆ.