ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ಬೆನ್ನಲ್ಲೇ, ನಿರ್ದೇಶಕ ಸೌಂದರ್ಯ ಜಗದೀಶ್ ಅವರ ಸಾವಿಗೆ ಒಂದು ಟ್ವಿಸ್ಟ್ ಸಿಕ್ಕಿದೆ. ಸೌಂದರ್ಯ ಜಗದೀಶ್ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ತಮ್ಮ ನಿವಾಸದಲ್ಲಿ ಕಳೆದ ಏ.14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನಲೇ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದವು.
ಸೌಂದರ್ಯ ಜಗದೀಶ್ ಅವರ ಅಕೌಂಟ್ನಿಂದ ಕೋಟಿಗಟ್ಟಲೆ ಹಣ ಪವಿತ್ರಾ ಗೌಡ ಅಕೌಂಟ್ಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಇದೀಗ ಜಗದೀಶ್ ಸೂಸೈಡ್ಗೂ ಈ ಹಣದ ವರ್ಗಾವಣೆಗೂ ಸಂಬಂಧ ಇದೆಯಾ ಎನ್ನುವ ಅನುಮಾನ ಶುರುವಾಗಿದೆ. ಮಾಹಿತಿ ಪ್ರಕಾರ ಪವಿತ್ರಾ ಗೌಡ ಅವರು ಮನೆ ಖರೀದಿಸಲು ಜಗದೀಶ್ 2 ಕೋಟಿ ರೂ ದುಡ್ಡು ಕೊಟ್ಟಿದ್ದಾರೆ ಎನ್ನಲಾಗಿದೆ.
ಕಳೆದ 2017ರ ನವೆಂಬರ್ 13ರಂದು ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ಅವರಿಂದ 1 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ.2018ರ ಜನವರಿ 23 ರಂದು ಪವಿತ್ರಾಗೌಡ ಅವರಿಗೆ ಮತ್ತೆ 1 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ. 2018, ಜನವರಿ 24 ರಂದು ಪವಿತ್ರಾ ಗೌಡ ಅವರು RR ನಗರ ಬಳಿಯ ಕೆಂಚನಹಳ್ಳಿಯಲ್ಲಿ 1.75 ಲಕ್ಷ ಮೌಲ್ಯದ ಮನೆ ಖರೀದಿಸಿದ್ದಾರೆ. ಅಲ್ಲದೇ ಖರೀದಿ ಪತ್ರದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಸಾಕ್ಷಿಯಾಗಿ ಸಹಿ ಹಾಗಿದ್ದಾರೆ.
ಇನ್ನೂ ಸೌಂದರ್ಯ ಜಗದೀಶ್ ಸಾವಿನ ಒಂದು ತಿಂಗಳ ನಂತರ ಅವರ ರೂಮ್ನಲ್ಲಿ ಡೆತ್ನೋಟ್ ಪತ್ತೆಯಾಗಿತ್ತು ಅದರಲ್ಲಿ ನನಗೆ 60 ಕೋಟಿ ರೂ ನಷ್ಟವಾಗಿದೆ ಎಂದು ಬರೆದುಕೊಂಡಿತ್ತು ಹಾಗಾಗಿ ಇನ್ನು ಸಂಶಯ ಹೆಚ್ಚಾಗಿದೆ.

