ಬೆಂಗಳೂರು: ಹೆಚ್.ಬಿ.ಆರ್ ಬಡಾವಣೆಯಲ್ಲಿರುವ ಕಂಪ್ಯೂಟರ್ ಹಾರ್ಡ್‌ವೇರ್ ಮಳಿಗೆಯೊಂದಕ್ಕೆ ಬುರ್ಖಾ ಧರಿಸಿ ನುಗ್ಗಿದ ತಂದೆ-ಮಗನ ಜೋಡಿ ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಕಳ್ಳತನ ಮಾಡಿದ್ದಾರೆ.

ಪೊಲೀಸರ ಕಣ್ಣು ತಪ್ಪಿಸಲು ಬುರ್ಖಾ ಧರಿಸಿ ಬಂದಿದ್ದ ಈ ಕಿರಾತಕರು, ಅಂಗಡಿಯಲ್ಲಿದ್ದ ಅತ್ಯಂತ ಬೆಲೆಬಾಳುವ ಪರ್ಟ್ಸ್‌ಗಳನ್ನು ಗುರಿಯಾಗಿಸಿಕೊಂಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ತಂದೆ ಮತ್ತು ಮಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಳವು ಮಾಡಿದ್ದ ಬಹುತೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

View this post on Instagram

A post shared by News Karnataka (@newskarnataka)