ರಾಮನಗರ: ಕಾರು ಪಲ್ಟಿಯಾಗಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಬರ್ತಿದ್ದ ಕುಟುಂಬಕ್ಕೆ ಹೊಸವರ್ಷ ನರಕವಾಗಿದೆ. ಮಾಗಡಿ ತಾಲೂಕು ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕೇನಹಳ್ಳಿಯಲ್ಲಿ ಘಟನೆ ನಡೆದಿದೆ.

ಬೈಕ್ ಹಿಂಬದಿ ಕೂತಿದ್ದ 29 ವರ್ಷದ ಅಶ್ವಿನಿ ದುರ್ಮರಣ ಹೊಂದಿದ್ದಾರೆ. ಬೈಕ್ ಸವಾರ ಪತಿ ರಮೇಶ್ ಹಾಗೂ ಮಗು ಯುವನ್ (1) ಗಂಭೀರ ಗಾಯಗೊಂಡಿದ್ದು, ಮತ್ತೊಂದು ಮಗು ಸಾನ್ವಿ (7) ಅಪಘಾತದಿಂದ ಪಾರಾಗಿದೆ.

ಕುಣಿಗಲ್ ನಿಂದ ನೆಲಮಂಗಲದ ಕಡೆ ಬರುತಿದ್ದ ಕಾರು ಮೂರು ಪಲ್ಟಿ ಹೊಡೆದು ಎದುರಿಗೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ.

ಅಪಘಾತ ಆಗುತ್ತಿದ್ದಂತೆ ಓರ್ವ ಪರಾರಿಯಾಗಿದ್ದು, ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.