ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್‌ ಅವರು ಗೆದ್ದು ಬೀಗಿದ್ದಾರೆ. ಒಂದು ಹಂತದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿಖಾನ್‌ ಅವರು 72 ಸಾವಿರ ಮತಗಳ ಮುನ್ನಡೆ ಕಾಯ್ದುಕೋಂಡಿದ್ದರು. ಇನ್ನೇನು ತಮ್ಮ ಅಭ್ಯರ್ಥಿಯೇ ಜಯ ಸಾಧಿಸುತ್ತಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಇದ್ದರು. ಆದರೆ ಕೊನೆಯಲ್ಲಿ ವಿಧಿ ಬೇರೆ ಇತ್ತು ಕೆಲವು ಸುತ್ತಗಳ ಮತ ಎಣಿಕೆಯಲ್ಲಿ ಪಿ.ಸಿ.ಮೋಹನ್‌ ಅವರು ಭರ್ಜರಿ ಮುನ್ನಡೆ ಕಾಯ್ದುಕೊಂಡು ಜಯ ಸಾಧಿಸಿದ್ದಾರೆ.

ಸತತ ಹಿನ್ನಡೆಯಲಿದ್ದ ಪಿ.ಸಿ.ಮೋಹನ್​ ಅವರಿಗೆ ಕೊನೇ ಕ್ಷಣದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರ ಕೈಹಿಡಿಯಿತು. ಮಹದೇವಪುರ ಕ್ಷೇತ್ರದಲ್ಲಿ ಸುಮಾರು 1.12 ಲಕ್ಷ ಮತಗಳಿಂದ ಮುನ್ನಡೆ ಪಡೆದು, ಗೆಲುವು ಸಾಧಿಸಿದ್ದಾರೆ.