ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ಪವಿತ್ರಾಗೌಡ ಪರ ಅವರು  ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಅರ್ಜಿ ವಜಾಗೊಳಿಸಿ ಸಿಸಿಎಚ್‌ 57ನೇ ನ್ಯಾಯಾಲಯದ ನ್ಯಾಯಾಧೀಶರಾದ ಜೈ ಶಂಕರ್‌ ಆದೇಶ ಹೊರಡಿಸಿದ್ದಾರೆ. ಎ1 ಆರೋಪಿ‌ ಪವಿತ್ರಾಗೌಡ ಪರ ಅನುಕುಮಾರ್ ಸಲ್ಲಿಸಿದ ಜಾಮೀನು ಅರ್ಜಿ ವಜಾಗೊಂಡಿದೆ. ಸದ್ಯ ಅವರು ಮತ್ತೆ ಜೈಲಿಗೆ ಹಿಂದಿರುಗಿದ್ದಾರೆ.

ದರ್ಶನ್‌ ಹಾಗೂ ಗ್ಯಾಂಗ್‌ ಮತ್ತು ಪವಿತ್ರಗೌಡ ಸೇರಿ ರೇಣುಸ್ವಾಮಿಯನ್ನು ಕೊಲ್ಲಾಲಾಗಿದೆ ಎಂದು ಅವರನ್ನು ಬಂಧಿಯನ್ನಾಗಿಸಲಾಗಿದೆ. ಇತ್ತೀಚೆಗೆ ದರ್ಶನ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಕೂಡ ಮಾಡಲಾಗಿದೆ,