ಬೆಂಗಳೂರು; ಆಟೋ ಹಿಂದೆ ಏನೆಲ್ಲಾ ಸಾಲುಗಳನ್ನು ಬರೆಸಿಕೊಂಡಿದ್ದವರನ್ನು ನಾವೆಲ್ಲರೂ ನೋಡಿದ್ದೇವೆ. ಕೆಲವರು ಹೆಂಡ್ತಿ ಬಗ್ಗೆ, ಕೆಲವರು ಪ್ರೀತಿ ಬಗ್ಗೆ, ಇನ್ನೂ ಕೆಲವರು ಜೀವನದ ಬಗ್ಗೆ ತಮ್ಮ ಆಟೋ ಹಿಂದೆ ಬರೆಸಿಕೊಳ್ಳುತ್ತಾರೆ. ಇದೀಗ ವೈರಲ್ ಆಗ್ತಿರೋ ಈ ಆಟೋ ಹಿಂದೆ ಕೂಡ ಮಹಿಳೆಯರಿಗೆ ಸಂಬಂಧಿಸಿದ ಸಾಲುಗಳನ್ನು ಬರೆಸಿಕೊಂಡಿದ್ದಾರೆ. ಈ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಆಟೋ ಯಾರದ್ದು ಅಂತ ಎಲ್ಲರೂ ಹುಡುಕುತ್ತಿದ್ದಾರೆ.
ಆಟೋ ಹಿಂದಿನ ಸಾಲುಗಳಿಗೆ ನೆಟ್ಟಿಗರು ಫಿದಾ!
ಹೌದು, ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ತನ್ನ ಆಟೋ ಹಿಂಭಾಗದಲ್ಲಿ ಮಹಿಳೆಯರಿಗಾಗಿ ಸಾಲುಗಳನ್ನು ಬರೆಸಿಕೊಂಡಿದ್ದಾರೆ. ‘ಸಣ್ಣ ಇರಲಿ, ದಪ್ಪ ಇರಲಿ, ಕಪ್ಪಾಗಿ ಇರಲಿ, ಬಿಳಿಯಾಗಿ ಇರಲಿ, ವರ್ಜಿನ್ ಆಗಿರಲಿ, ಆಗದೇ ಇರಲಿ ಎಲ್ಲಾ ಮಹಿಳೆಯರಿಗೂ ಗೌರವ ಕೊಡಬೇಕು’ ಅಂತ ಈ ಆಟೋ ಹಿಂದೆ ಬರೆದಿದೆ. ಇದನ್ನು ಕಂಡ ಮಹಿಳೆಯೊಬ್ಬರು ಎಕ್ಸ್ನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.
ಈ ವೈರಲ್ ಆದ ಫೋಟೋವನ್ನು ಸಾಕಷ್ಟು ಮಂದಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಈ ಆಟೋ ಡ್ರೈವರ್ಗೆ ಮಹಿಳೆಯರ ವ್ಯಾಲ್ಯೂ ಗೊತ್ತಿದೆ ಅಂತೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಕೆಲ ನೆಟ್ಟಿಗರು ನಿಜಕ್ಕೂ ಸತ್ಯ ಹೇಳಿದ್ದೀರಾ ಅಣ್ಣ, ನಿಮ್ಮನ್ನು ಒಮ್ಮೆ ನೋಡಬೇಕು ಅಂತ ಕಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಇದು ನಿಜವಾಗಿ ನಡೆದರೆ ಎಷ್ಟು ಸಂತೋಷ ಆಗುತ್ತೆ ಅಲ್ವಾ ಅಂತ ಹೇಳಿದ್ದಾರೆ. ಹೀಗೆ ಸಾಲುಗಳನ್ನು ಬರೆಸಿಕೊಂಡರೇ ಸಾಲದು, ಆ ರೀತಿಯೇ ನಡೆದುಕೊಳ್ಳಬೇಕು ಅಂತ ಬರೆದುಕೊಂಡಿದ್ದಾರೆ. ಇನ್ನೊಬ್ಬರು ಅಣ್ಣ ನೀವು ನಿಜವಾಗಿಯೂ ನೀವು ಅಕ್ಕ-ತಂಗಿಯರ ಜೊತೆ ಬೆಳೆದಿದ್ದೀರಾ. ಅದಕ್ಕೆ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಅಂತ ಗೊತ್ತಿದೆ ಅಂತ ಬರೆದುಕೊಂಡಿದ್ದಾರೆ.
“ಯಾರನ್ನಾದರೂ ಗೌರವಿಸುವುದಕ್ಕೂ ಅವರ ತೂಕ, ಕನ್ಯತ್ವ ಅಥವಾ ಬಣ್ಣಕ್ಕೂ ಏನು ಸಂಬಂಧವಿದೆ,” ಎಂದು ಮತ್ತೊಬ್ಬರು ಹೇಳಿದರು. ಒಟ್ಟಿನಲ್ಲಿ ಈ ಆಟೋ ಡ್ರೈವರ್ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

