ಬೆಂಗಳೂರು: ಕುಟುಂಬವು ರೀಲ್ ವಿಡಿಯೋಗಾಗಿ ವೃದ್ಧ ತಂದೆಯನ್ನು ಗೋಣಿಚೀಲದಲ್ಲಿ ತುಂಬಿಸಿ, ನಗರದಿಂದ ಹೊರಗೆ “ಪಾರ್ಸೆಲ್ ಕಳುಹಿಸಲು” ಕೊರಿಯರ್ ಕಚೇರಿಗೆ ಕರೆದೊಯ್ದಿದೆ. ಕೊರಿಯರ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಪಾರ್ಸೆಲ್ ತೆರೆದಾಗ ಆ ವ್ಯಕ್ತಿ ಉಸಿರಾಡಲು ಕಷ್ಟಪಡುತ್ತಿರುವುದು ಕಂಡುಬಂದಿತು. ಹಬ್ಬದ ಪ್ರಯಾಣದ ಸಂಕಷ್ಟಗಳನ್ನು ಎತ್ತಿ ತೋರಿಸಲು ರೀಲ್ ಇದು ಎಂದು ಅವರ ಕುಟುಂಬ ಹೇಳಿಕೊಂಡಿದೆ. ಪೊಲೀಸರು ಅವರನ್ನು ಬಂಧಿಸಿ, ಎಚ್ಚರಿಕೆ ನೀಡಿ ನಂತರ ಬಿಡುಗಡೆ ಮಾಡಿದರು.
ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿಯಾಗದೆ. ಜನರು ಆನ್‌ಲೈನ್ ಜನಪ್ರಿಯತೆ ಮತ್ತು ಗಮನಕ್ಕಾಗಿ ಎಲ್ಲಾ ಮಿತಿಗಳನ್ನು ಮೀರುತ್ತಿದ್ದಾರೆ.

