ಬೆಂಗಳೂರು : ವಿವಿಧ ಕಾರಾಗೃಹಗಳಲ್ಲಿ ಕಳೆದ 36 ಗಂಟೆಗಳಲ್ಲಿ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ನಿರ್ಬಂಧಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಕೇಂದ್ರ ಕಾರಾಗೃಹದಿಂದ 6 ಮೊಬೈಲ್ ಹಾಗೂ 4 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೈಸೂರು ಜೈಲಿನಲ್ಲಿ 9 ಮೊಬೈಲ್ ಹಾಗೂ 11 ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಬೆಳಗಾವಿ ಜೈಲಿನಲ್ಲಿ 4 ಮೊಬೈಲ್ ಹಾಗೂ ಹೊರಗಿನಿಂದ ಎಸೆಯಲಾಗಿದ್ದ 366 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರಿನಲ್ಲಿ 4 ಹಾಗೂ ವಿಜಯಪುರ ಜೈಲಿನಲ್ಲಿ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ‘ಎಕ್ಸ್’ ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಜೈಲುಗಳ ಒಳಗಿನ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಇಂತಹ ದಿಢೀರ್ ದಾಳಿಗಳು ಮುಂದಿನ ದಿನಗಳಲ್ಲೂ ಮುಂದುವರಿಯಲಿವೆ” ಎಂದು ಅಲೋಕ್ ಕುಮಾರ್ ಎಚ್ಚರಿಸಿದ್ದಾರೆ. ಜೈಲಿನಲ್ಲಿ ಸಿಕ್ಕ ಮಾದಕ ವಸ್ತುಗಳನ್ನೆಲ್ಲಾ ವಶಕ್ಕೆ ಪಡೆದು ದೂರು ದಾಖಲಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ.