ಬೆಂಗಳೂರು: ಭೀಮಾ ಸಿನಿಮಾ ವೀಕ್ಷಣೆಗೆ ಬಂದಿದ್ದ ಯವತಿಗೆ ಫಿಲ್ಮಂ ಥಿಯೇಟರ್‌ನಲ್ಲಿ ಕಾಮುಕನೊಬ್ಬ ಕಾಟ ಕೊಟ್ಟಿದ್ದಾನೆ.

ಬೆಂಗಳೂರಿನ ಊರ್ವಶಿ ಥಿಯೇಟರ್‌ನ ಲೇಡಿಸ್ ವಾಶ್ ರೂಂನಲ್ಲಿ ಯುವತಿಯ ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ. ಯುವತಿಯೊಬ್ಬಳು ಊರ್ವಶಿ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆಗೆ ಬಂದಿದ್ದಳು. ರಾತ್ರಿ 9:30ರ ಶೋನ ಇಂಟರ್ ವೆಲ್‌ನಲ್ಲಿ ವಾಶ್ ರೂಂಗೆ ತೆರಳಿದ್ದಾಳೆ. ಈ ವೇಳೆ ಸಿನಿಮಾ ನೋಡಲು ಬಂದಿದ್ದ ಕಿರಾತಕನೊಬ್ಬ ಕಿಟಕಿಯಿಂದ ಮೊಬೈಲ್ ಇಟ್ಟು ವಿಡಿಯೋ ಚಿತ್ರಿಕರಿಸಿದ್ದಾನೆ. ಇದು ಗಮನಕ್ಕೆ ಬರುತ್ತಿದ್ದಂತೆ ಯುವತಿ ಹೊರಗೆ ಓಡಿ ಬಂದಿದ್ದಾಳೆ. ಸದ್ಯ ಯುವತಿ ಕೊಟ್ಟ ದೂರಿನನ್ವಯ ಅಪ್ರಾಪ್ತ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.