ಅಪರ್ಣಾ ವಸ್ತಾರೆ ನೆನಪು ನುಡಿಗಳಲ್ಲಿ…ಸಾಲುಗಳಲ್ಲಿ ಬಂಧಿ ಆಗಿದೆ. ನಿರೂಪಣಾ ಜೀವನದಲ್ಲಿ, ಸಿನಿಮಾ ಜೀವನದಲ್ಲಿ ವಿಶೇಷವಾಗಿಯೇ ಕಾಣಿಸಿಕೊಂಡ ಅಪರ್ಣಾ, ಪತಿ ನಾಗರಾಜ್ ವಸ್ತಾರೆ ಅವರಿಗ ಪ್ರೀತಿಯ ಅಪರ್ಣೆ ಆಗಿದ್ದರು.
ಹೌದು. . ಪತ್ನಿ ಅಪರ್ಣೇಗೆ ನಾಗರಾಜ್ ವಸ್ತಾರೆ ಅವರು, ವಿಶೇವಾಗಿಯೇ ಗಾನನಮನ ಸಲ್ಲಿಸಿದ್ದಾರೆ. “ಹೇ ಅಪರ್ಣೇ ನುಡಿಗಾತಿಯ ಹಿಡಿನೆನಪುಗಳು” ಅಂತಲೇ ಬೆಂಗಳೂರಿನಲ್ಲಿಯೇ ಭಾನುವಾರ ಒಂದು ಕಾರ್ಯಕ್ರಮ ಮಾಡಿದ್ದಾರೆ. ಅಪರ್ಣಾ ಅವರ ಫೋಟೋಗಳನ್ನ ಕೂಡ ಈ ಒಂದು ಗಾನನಮನ ಕಾರ್ಯಕ್ರಮದಲ್ಲಿ ಇಡಲಾಗಿತ್ತು.

ಪ್ರತಿ ಫೋಟೋಗೂ ಒಂದೊಂದು ಕವಿತೆಯನ್ನ ಬರೆಯಲಾಗಿತ್ತು .ಅಪರ್ಣಾ ವಸ್ತಾರೆ ಇದೇ ಜುಲೈ-11 ರಂದು ನಿಧನರಾಗಿದ್ದಾರೆ.

ಅಪರ್ಣಾ ವಸ್ತಾರೆ ಅವರ ಈ ಒಂದು ಪ್ರಾರ್ಥನಾ ಸಭೆ ವಿಶೇಷವಾಗಿಯೇ ಇತ್ತು. ಪತಿ ನಾಗರಾಜ್ ವಸ್ತಾರೆ ಆಯೋಜಿಸಿದ್ದ ಈ ಒಂದು ವಿಶೇಷ ಕಾರ್ಯಕ್ರಮದಲ್ಲಿ ಅಪರ್ಣಾ ಅವರ ವಿಶೇಷ ಫೋಟೋಗಳನ್ನ ಇಡಲಾಗಿತ್ತು. ಈ ಪ್ರತಿ ವಿಶೇಷ ಫೋಟೋಗೂ ಒಂದೊಂದು ಕವಿತೆಯನ್ನ ಬರೆಯಲಾಗಿತ್ತು. ಒಂದು ರೀತಿ ಇದು ಕವಿತೆ, ನೆನಪು, ಗಾನನಮನ ಹಿಂಗೆ ಮೂರು ಒಳಗೊಂಡ ಒಂದು ಪ್ರಾರ್ಥನಾ ಸಭೆ.

ಅಪರ್ಣಾ ವಸ್ತಾರೆ ಅವರ ಈ ಒಂದು ನೆನಪಿನ ಕಾರ್ಯಕ್ರಮಕ್ಕೆ ಎಲ್ಲ ಸೆಲೆಬ್ರಿಟಿಗಳೂ ಬಂದಿದ್ದರು. ನಟ ಅನಿರುದ್ದ್ ಜತ್ಕರ್, ನಟಿ ವರ್ಷಾ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ವೀರಕಪುತ್ರ ಹಿಂಗೆ ಇನ್ನೂ ಅನೇಕರು ಆಗಮಿಸಿದ್ದರು. ಹಾಗೆ ಇವರೆಲ್ಲ ಈ ಬಗ್ಗೆ ತಮ್ಮ ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡು ಫೋಟೋಗಳನ್ನ ಕೂಡ ಹಂಚಿಕೊಂಡಿದ್ದಾರೆ.

