ಬೆಂಗಳೂರು: ಪತ್ರಕರ್ತ ಶಹಬಾಜ್ ಅನ್ಸಾರ್ ಅವರ ಪತ್ನಿಯ ಮುಖದ ಮೇಲೆ ಆ್ಯಸಿಡ್ ಎರಚುವುದಾಗಿ ನಿಕಿತ್ ಶೆಟ್ಟಿ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ. ಇದೀಗ ಆತನನ್ನು ಉದ್ಯೋಗದಿಂದ ಅಮಾನತುಗೊಳಿಸಲಾಗಿದೆ. ಶಹಬಾಜ್ ಅನ್ಸಾರ್ ಅವರ ಪತ್ನಿಗೆ ಉತ್ತಮ ಉಡುಗೆಯನ್ನು ಹಾಕಿಕೊಳ್ಳುವುಂತೆ ಅದರಲ್ಲೂ ಕರ್ನಾಟಕದಲ್ಲಿ ಒಳ್ಳೆ ರೀತಿಯಲ್ಲಿ ಬಟ್ಟೆ ಹಾಕುವಂತೆ ಹೇಳಿದ್ದು ಇಲ್ಲದಿದ್ದರೆ ಮುಖಕ್ಕೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ, ಶಹಬಾಜ್ ಸಂದೇಶದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ, “ಇದು ಗಂಭೀರವಾಗಿದೆ. @DgpKarnataka @CMofKarnataka @DKShivakumar. ಬಟ್ಟೆ ಆಯ್ಕೆಗಾಗಿ ನನ್ನ ಹೆಂಡತಿಯ ಮುಖದ ಮೇಲೆ ಆಸಿಡ್ ಎರಚುವುದಾಗಿ ಈ ವ್ಯಕ್ತಿ ಬೆದರಿಕೆ ಹಾಕುತ್ತಿದ್ದಾನೆ. ಯಾವುದೇ ಘಟನೆ ನಡೆಯದಂತೆ ತಡೆಯಲು ದಯವಿಟ್ಟು ಈ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದು ಪೋಸ್ಟ್ ಮಾಡಿದ್ದಾರೆ.

