ಬೆಂಗಳೂರು : ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸರ್ಕಾರ ಅವಕಾಶ ನೀಡಿದ್ದು, ಪ್ರಯಾಣಿಸುವಾಗ ಆಧಾರ್, ವೋಟರ್ ಐಡಿ ಯಾವುದಾದರೂ ಸರ್ಕಾರಿ ದಾಖಲೆ ತೋರಿಸುವುದು ಕಡ್ಡಾಯವಾಗಿದೆ.

ಬೆಂಗಳೂರು ವಿಳಾಸವಿರುವ ಆಧಾರ್ ಕಾರ್ಡ್ನಲ್ಲಿ ತಮಿಳಿನಲ್ಲಿ ಮುದ್ರಿಸಿರುವ ಕಾರಣ ಇದು ಈ ರಾಜ್ಯಕ್ಕೆ ಅನ್ವಯಿಸುವುದಿಲ್ಲ, ಇದು ದಾಖಲೆ ನಕಲಿ ಎಂದು ಶಂಕಿಸಿ ಬಿಎಂಟಿಸಿ ಕಂಡಕ್ಟರ್ ಓರ್ವವರು ಕಾಲೇಜು ವಿದ್ಯಾರ್ಥಿಯನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ.

ಉಚಿತ ಟಿಕೆಟ್ ನೀಡುವಾಗ ವಿದ್ಯಾರ್ಥಿನಿಯು ಆಧಾರ್ ಕಾರ್ಡ್ ತೋರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಶಿವಾಜಿನಗರದಿಂದ ಲಿಂಗರಾಜಪುರದ ಮನೆಗೆ ವಿದ್ಯಾರ್ಥಿನಿ ತೆರಳುತ್ತಿದ್ದಾಗ ನಿನ್ನೆ ಈ ಘಟನೆ ನಡೆದಿದ್ದು, ಕಂಡಕ್ಟರ್ ಒತ್ತಾಯದಿಂದ ಕೆಳಗೆ ಇಳಿಸಿದ್ದಾಗಿ ಆಕೆ ಆರೋಪಿಸಿದ್ದಾಳೆ.