ನೆಲಮಂಗಲ: ಕೇರಳದ ಕಣ್ಣೂರು ಕಡಲಲ್ಲಿ ನೆಲಮಂಗಲದ ಯುವಕ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಬ್ಯಾಡರಹಳ್ಳಿ ನಿವಾಸಿ ಸಂತೋಷ್ (21) ಮೃತ ಯುವಕ. ಈತ ಇಬ್ಬರು ಸ್ನೇಹಿತರ ಜೊತೆ ಕೊಟ್ಟಿಯೂರ್‌ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದು ಅಲ್ಲಿಂದ ಕಣ್ಣೂರು ಕಡಲನ್ನು ನೋಡಲು ತೆರಳಿದ್ದ. ಈ ವೇಳೆ ಯುವಕರು ಸಮುದ್ರಕ್ಕೆ ಇಳಿದಿದ್ದರು. ಅಲೆಯ ಹೊಡೆತಕ್ಕೆ ಸಂತೋಷ್‌ ನೀರಿನಲ್ಲಿ ಮುಳುಗಿದ್ದಾನೆ.

ಯುವಕ ನೀರಿನಲ್ಲಿ ಮುಳುಗುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸಂತೋಷ್ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.