ಬೆಂಗಳೂರು: ನರೇಂದ್ರ ಮೋದಿ ಅವರನ್ನು ಅವಾಚ್ಯವಾಗಿ ಟೀಕಿಸಿದ ವ್ಯಕ್ತಿಯೊಬ್ಬನನ್ನು ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಹದಿನೈದು ಜನರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ. ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದ ಎನ್ನಲಾಗಿದೆ.
ಈ ಯುವಕನ ಮೇಲೆ ರೊಚ್ಚಿಗೆದ್ದ ಗುಂಪು ಹಲ್ಲೆ ಮಾಡಿ ಮೋದಿ, ಮೋದಿ ಎಂದು ಕೂಗು ಎಂದು ಬಲವಂತ ಮಾಡಿದೆ. ಆದರೆ ಯುವಕ ಇದಕ್ಕೆ ಒಪ್ಪದಿದ್ದಾಗ ಮತ್ತಷ್ಟು ಹಲ್ಲೆ ಮಾಡಿದೆ. ಸುಮಾರು ಹದಿನೈದು ಜನರ ಯುವಕರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ. ಮಾತ್ರವಲ್ಲ, ನೀನು ಮೋದಿಗೆ ಬೈಯ್ಯುವ ಹಾಗಿಲ್ಲ, ನೀನು ಸಿದ್ದರಾಮಯ್ಯ ಫಾಲೋವರ್ ಆಗಿದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊ ಎಂದು ಎಚ್ಚರಿಸಿದೆ.
ಯುವಕನನ್ನು ಉಪ್ಪಾರಪೇಟೆ ಉಪ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಲ್ಲೆ ನಡೆಸಿದವರನ್ನು ಪೊಲೀಸರು ಹುಡುಕಾಟ ನಡೆಸಲಾಗುತ್ತಿದೆ.

