ಚಿಕ್ಕೋಡಿ: ಮಳೆ ಅಬ್ಬರಕ್ಕೆ ಬೃಹತ್‌ ಕಟ್ಟಡವೊಂದು ನೆಲಕ್ಕುರುಳಿದ ಘಟನೆ ಅಥಣಿಯಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಸುರಿದ ಮಳೆಗೆ ಅಥಣಿ ಪಟ್ಟಣದ ಹಲ್ಯಾಳ ರಸ್ತೆಯಲ್ಲಿರುವ ಶಿಥಿಲಾವಸ್ಥೆಯ ಕಟ್ಟಡ ಕುಸಿದು ಬಿದ್ದಿದೆ. ರಾವಸಾಬ ಐಹೊಳೆ ಎಂಬವವರಿಗೆ ಈ ಕಟ್ಟಡ ಸೇರಿದೆ.

ಕಟ್ಟಡ ಬೀಳುವ ಸಂದರ್ಭದಲ್ಲಿ ಯಾರು ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಪ್ರಕರಣ ಅಥಣಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.