ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ  ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ನೋಡಲು ಅಭಿಮಾನಿಯೊಬ್ಬ ಟೆಡ್ಡಿಬೇರ್ ವೇಷ ಧರಿಸಿ ಬರುವ ಮುಲಕ ಗಮನ ಸೆಳೆದಿದ್ದಾನೆ.

ಅಭಿಮಾನಿಯನ್ನು ಕಾರ್ತಿಕ್‌ ಎಂದು ಗುರುತಿಸಲಾಗಿದ್ದು, ಈತ ಶಿವಮೊಗ್ಗ ಜಿಲ್ಲೆ ಸಾಗರ ನಿವಾಸಿ. ಈತ ಟೆಡ್ಡಿಬೇರ್ ವೇಷ ಧರಿಸಿ ‘ವಿ ಆರ್ ವೇಟಿಂಗ್ ಫಾರ್ ಯೂ ಡಿ ಬಾಸ್’ ಎಂಬ ಸಂದೇಶದ ಫಲಕ ಹಿಡಿದು ಬಳ್ಳಾರಿ ಜೈಲಿಗೆ ಬಂದಿದ್ದಾನೆ. ಅಲ್ಲದೇ ದರ್ಶನ್ ಭೇಟಿಗೆ ಅವಕಾಶ ಕೇಳಿದ್ದಾನೆ.

ಜೈಲು ಸಿಬ್ಬಂದಿ ಕಾರ್ತಿಕ್‌ಗೆ ಅವಕಾಶ ನಿರಾಕರಿಸಿದ್ದಾರೆ. ಅವರ ಕುಟುಂಬಸ್ಥರ ಒಪ್ಪಿಗೆ ಇಲ್ಲದೇ ಯಾರಿಗೂ ಭೇಟಿಗೆ ಅವಕಾಶ ಇಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ.