ದೊಡ್ಡಬಳ್ಳಾಪುರ : ಪಾಲನಜೋಗಿಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಹುಡುಗ ಮನೆ ಹತ್ತಿರ ಆಟವಾಡುವ ಸಮಯದಲ್ಲಿ ಬೀದಿ ನಾಯಿ ಕಚ್ಚಿರುವ ಘಟನೆ ನಡೆದಿದೆ.

ಬೀದಿನಾಯಿಗಳ ಉಪಟಳ ಪಾಲನಜೋಗಿಹಳ್ಳಿ ಗ್ರಾಮದಲ್ಲಿ ಹೆಚ್ಚಾಗಿದೆ. ಕೊಡಿಗೇಹಳ್ಳಿ ಗ್ರಾಮಪಂಚಾಯಿತಿ ಇದರ ಕಡೆ ಗಮನ ಹರಿಸಬೇಕು. ಬೀದಿ ನಾಯಿಗಳನ್ನು ಹಿಡಿದು ನಾಗರಿಕರಿಗೆ ರಕ್ಷಣೆ ನೀಡಬೇಕು.

ಪಾಲನಜೋಜಗಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಕೇವಲ ಚುನಾವಣೆ ಸಮಯದಲ್ಲಿ ಕಾಣಿಸುವುದು ಬಿಟ್ಟರೆ ಬೇರೆ ಸಮಯದಲ್ಲಿ ಕಾಣೆ ಆಗಿರುತ್ತಾರೆ.

ಇಂತಹ ಸಮಯದಲ್ಲಿ ಬಂದು ಗ್ರಾಮದ ನಾಗರಿಕರಿಗೆ ಹಾಗೂ ಮಕ್ಕಳ ರಕ್ಷಣೆಗೆ ಮುಂದಾಗಬೇಕು. ಈ ಕೂಡಲೇ ಬೀದಿ ನಾಯಿಗಳ ಸ್ಥಳಾಂತರ ಮಾಡಬೇಕು.