ಬೆಂಗಳೂರು: ಮೊಬೈಲ್ ಕಳ್ಳತನ ಮಾಡುತ್ತಿದ್ದ 42 ಮಂದಿ ಆರೋಪಿಗಳನ್ನು ಲಿಕಾನ್ ಸಿಟಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಳ್ಳರ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು. ಇದೀಗ ಸಿಸಿಬಿ ಪೊಲೀಸರು 3.36 ಕೋಟಿ ಮೌಲ್ಯದ ಒಟ್ಟು 1,949 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೇವಲ ಆರು ಮಂದಿ ಕಳ್ಳರಿಂದ 450 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆಯ ವೇಳೆ ಕಳ್ಳರ ಕರಾಮತ್ತು ಬಯಲಾಗಿದೆ. ಕಳ್ಳರು ಬಾಯ್ಬಿಟ್ಟ ಸತ್ಯ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಐದಾರು ಮಂದಿ ಕಳ್ಳರು ಬಸ್ಸಿನಲ್ಲಿ ಒಟ್ಟಿಗೆ ಬರುತ್ತಿದ್ದರು. ಈ ವೇಳೆ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಎಗರಿಸುತ್ತಿದ್ದರು. ಬಳಿಕ ಒಬ್ಬರಿಂದ ಒಬ್ಬರಿಗೆ ಮೊಬೈಲ್ ಶಿಫ್ಟ್ ಆಗುತ್ತಿತ್ತಂತೆ.
ಹೀಗೆ ಬಂದ ಮೊಬೈಲ್ಗಳನ್ನು ಅಲ್ಯೂಮಿನಿಯಂ ಫೈಲ್ನಲ್ಲಿ ಗಟ್ಟಿಯಾಗಿ ಸುತ್ತಿಡುತ್ತಿದ್ದರು. ಹೀಗೆ ಮಾಡಿದರೆ ಕೂಡಲೇ ಮೊಬೈಲ್ ನೆಟ್ವರ್ಕ್ ಜಾಮ್ ಆಗುತ್ತಿತ್ತು. ಹೀಗಾಗಿ ಆ ಸಂದರ್ಭದಲ್ಲಿ ಯಾರೇ ಕರೆ ಮಾಡಿದರು ಕಾಲ್ ರಿಚ್ ಆಗುತ್ತಿರಲಿಲ್ಲ. ಬದಲಾಗಿ ಮೊಬೈಲ್ ಸ್ವಿಚ್ ಆಫ್ ಅಥವಾ ಬ್ಯುಸಿ ಅಂತ ಬರುತ್ತದೆ. ಈ ಉಪಾಯ ಬಳಸಿ ಕಳ್ಳರು ಮೊಬೈಲ್ ಕಳ್ಳತನ ಮಾಡುತ್ತಿದ್ದರು.

