ಬೆಂಗಳೂರು : ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024ರಲ್ಲಿ ಪುರುಷ ಸ್ಪರ್ಧಿಯಿಂದ ಮೂಗಿಗೆ ಪಂಚ್ ತಿಂದು ವಿವಾದಾತ್ಮಕ ಸೋಲಿಗೆ ಒಳಗಾದ ಇಟಲಿಯ ಮಹಿಳಾ ಬಾಕ್ಸರ್ಗೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ 41 ಲಕ್ಷ (50 ಸಾವಿರ ಡಾಲರ್) ಬಹುಮಾನ ಘೋಷಿಸಿದೆ. ಗುರುವಾರ ನಡೆದ ವೆಲ್ಟರ್ವೇಟ್ ರೌಂಡ್ ಆಫ್ 16 ಪಂದ್ಯದಲ್ಲಿ ಅಲ್ಜೀರಿಯಾದ ಇಮಾನೆ ಖೇಲಿಫ್ ವಿರುದ್ಧ ಕಾರಿನಿ 46 ಸೆಕೆಂಡುಗಳಲ್ಲಿ ಸೋತಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದವಾಗಿತ್ತು.
ಒಲಿಂಪಿಕ್ಸ್ ಸಂಸ್ಥೆ ಜತೆ ಜಿದ್ದಿಗೆ ಬಿದ್ದಿರುವ ಬಾಕ್ಸಿಂಗ್ ಸಂಸ್ಥೆ ಕಾರಿನಿಗೆ 50,000 ಡಾಲರ್, ಇಟಲಿ ಫೆಡರೇಶನ್ಗೆ 25,000 ಡಾಲರ್ ಮತ್ತು ಕೋಚ್ಗೆ ಹೆಚ್ಚುವರಿಯಾಗಿ 25,000 ಡಾಲರ್ ಕೊಡುವುವದಾಗಿ ಹೇಳಿದೆ.

