ಬೆಂಗಳೂರು: ವಿಶ್ವದಾದ್ಯಂತ ಮೈಕ್ರೋಸಾಫ್ಟ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಹೀಗಾಗಿ ವಿಮಾನ ಸಂಚಾರದಲ್ಲಿ, ರೈಲು ಸಂಚಾರದಲ್ಲಿ, ಬ್ಯಾಂಕಿಂಗ್, ಷೇರು ಪೇಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಿಂದ ವಿವಿಧೆಡೆಗೆ ತೆರಳಬೇಕಿದ್ದ 21 ಇಂಡಿಗೋ ವಿಮಾನಗಳನ್ನು ರದ್ದು ಮಾಡಲಾಗಿದೆ. ಹೀಗಾಗಿ ಅಕ್ಷರಶಃ ಪ್ರಯಾಣಿಕರು ಪರದಾಡಿದ್ದಾರೆ. ಈ ಬಗ್ಗೆ ಏರ್‌ಲೈನ್ಸ್ ಸಿಬ್ಬಂದಿ ಸೇರಿದಂತೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲವೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಗೋ ಏರ್‌ಲೈನ್ಸ್ ಕಚೇರಿಯಲ್ಲಿ ಮಾಹಿತಿ ಪಡೆಯಲು ಗಂಟೆಗಟ್ಟಲೇ ಕ್ಯೂ ನಿಲ್ಲಬೇಕಾಗಿದ್ದು, ಯಾವ ಫ್ಲೈಟ್ ರದ್ದಾಗಿದೆ, ಯಾವುದು ಸಿದ್ಧವಿದೆ ಎಂಬ ಬಗ್ಗೆ ಮಾಹಿತಿ ಕೂಡ ಕೊಡಲಿಲ್ಲವಂತೆ. ಹಾಗಾಗಿ ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿಯ ವಿರುದ್ಧ ಪ್ರಯಾಣಿಕರು ಗರಂ ಆಗಿದ್ದಾರೆ.

