ಚಿಕ್ಕೋಡಿ: ಬಾಲಕಿಗೆ 10 ರೂಪಾಯಿಯ ಆಸೆ ತೋರಿಸಿ ವೃದ್ಧ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಿಪ್ಪಾಣಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಲೈಂಗಿಕ ಕಿರುಕುಳ ನೀಡಿದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಅಸೀಫ್ ಭಾಗವಾನ್(70) ಬಾಲಕಿಗೆ ಬಾಲಕಿಗೆ 10 ರೂಪಾಯಿಯ ಆಸೆ ತೋರಿಸಿ ಬಾಲಕಿಯ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದವನು.ಬಳಿಕ ಈ ವಿಷಯವನ್ನು ಬಾಲಕಿ ಪೋಷಕರ ಬಳಿ ತಿಳಿಸಿದ್ದಳು. ವಿಷಯ ತಿಳಿದು ಸ್ಥಳೀಯರು ಅಸೀಫ್‌ಗೆ ಧರ್ಮದೇಟು ನೀಡಿದ್ದರು. ಇದೀಗ ಕಾಮುಕ ಅಸೀಫ್ ಭಾಗವಾನ್‌ನನ್ನು ನಿಪ್ಪಾಣಿ ಶಹರ ಪೊಲೀಸರು ಬಂಧಿಸಿದ್ದಾರೆ.

