ಬೆಳಗಾವಿ: ರಾಜ್ಯದಲ್ಲಿ ಹಿಂದೂಗಳನ್ನು ದುರ್ಬಲಗೊಳಿಸಲು ಹಾಗೂ ಹಿಂದೂ ಧರ್ಮ ವಿಭಜಿಸಲು ಸಚಿವ ಪ್ರಿಯಾಂಕಾ ಖರ್ಗೆ ಕುತಂತ್ರ ನಡೆಸಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಹಿಂದೂಗಳ ರಕ್ಷಣೆಗೆ ನಿಂತ ಆರ್ಎಸ್ಎಸ್ ಅನ್ನೇ ಗುರಿಯಾಗಿಸಿಕೊಂಡು ಖರ್ಗೆ ಮಾತನಾಡುತ್ತಿದ್ದಾರೆ. ಈ ಬೆಳವಣಿಗೆಗಳ ಹಿಂದೆ, ಹಿಂದೂ ವಿರೋಧಿ ಸಂಘಟನೆಗಳ ಕುಮ್ಮಕ್ಕು ಇರುವ ಶಂಕೆ ಇದೆ ಎಂದು ಇಲ್ಲಿ ಭಾನುವಾರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಜಗತ್ತಿನ ಯಾವುದೇ ಭಾಗದಲ್ಲಿ ಹಿಂದೂಗಳ ಮೇಲೆ ಅನ್ಯಾಯವಾದರೂ ಆರ್ಎಸ್ಎಸ್ ಧ್ವನಿ ಎತ್ತುತ್ತ ಬಂದಿದೆ. ಆದರೆ, ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ರಕ್ಷಿಸುವ ಮತ್ತು ಭಾರತ್ ಮಾತಾಕೀ ಜೈ ಎನ್ನುವವರನ್ನು ತುಳಿಯುವ ಕೆಲಸ ನಡೆಯುತ್ತಿದೆ’ ಎಂದು ಆಪಾದಿಸಿದರು.

