ಬೆಳಗಾವಿ : ಬೆಳಗಾವಿಯ ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲೇ ಫೈರಿಂಗ್ ನಡೆದಿದೆ. ಬೆಳಗಾವಿ ನಗರದ ಜಿಮಖಾನ್ ಕ್ಲಬ್ ನಲ್ಲಿ ಫೈರಿಂಗ್ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ. ರಮ್ಮಿ ಕ್ಲಬ್ ನಲ್ಲೇ ಅಟ್ಯಾಕ್ ಮಾಡಿ ದುಷ್ಕರ್ಮಿಗಳಿಂದ ಹತ್ಯೆಗೆ ಯತ್ನಿಸಲಾಗಿದೆ.

ಸುರೇಶ್ ಜಾಲಗಾರ ಎಂಬಾತನ ತಲೆಗೆ ಗನ್ ದಿಂದ ಕುಕ್ಕಿ ಬಳಿಕ ಫೈರಿಂಗ್ ನಡೆಸಲಾಗಿದೆ. ಫೈರಿಂಗ್ ಮಾಡುವ ಮುನ್ನವೇ ತಳ್ಳಿ ತಪ್ಪಿಸಿಕೊಂಡು ಸುರೇಶ್ ಎಸ್ಕೇಪ್ ಆಗಿದ್ದಾರೆ. ತಕ್ಷಣ ಫೈರಿಂಗ್ ಮಾಡಿ ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದಾರೆ.

ಸುರೇಶ್ ಪರಾರಿಯಾದ ಬಳಿಕ ಹೊರ ಬಂದು ಮತ್ತೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಐದು ಜನರಿಂದ ಜಿಮಖಾನ್ ಕ್ಲಬ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರು ಹೊರ ನಿಂತ್ರೇ ಮೂರು ಜನರಿಂದ ಒಳ ಬಂದು ಹತ್ಯೆಗೆ ಯತ್ನಿಸಿದ್ದಾರೆ. ರಮ್ಮಿ ಆಡ್ತಿದ್ದ ಸುರೇಶ್ ಮೇಲೆ ಫೈರಿಂಗ್ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಭೇಟಿ ನೀಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದು ಪೊಲೀಸ್ ಕಮೀಷನರ್ ತೆರಳಿದ್ದರು. ಪೊಲೀಸರು ಬರ್ತಿದ್ದಂತೆ ಸುರೇಶ್ ಜಾಲಗಾರ ಓಡೋಡಿ ಬಂದರು. ಪ್ರಫುಲ್ ಪಾಟೀಲ್ ಎಂಬಾತನ ಮೇಲೆ ಈ ಹಿಂದೆ ಸುರೇಶ್ ಜಾಲಗಾರ ಫೈರಿಂಗ್ ಮಾಡಿದ್ದ. ಇದನ್ನ ಸೇಡು ತೀರಿಸಿಕೊಳ್ಳಲು ಇಂದು ಪ್ರಫುಲ್ ಪಾಟೀಲ್ ಕಡೆಯ ಹುಡುಗರಿಂದ ಹತ್ಯೆಗೆ ಯತ್ನ ಮಾಡಿದ್ದಾರೆಂದು ಸುರೇಶ್ ಜಾಲಗಾರ ಹೇಳಿದರು.

ಸುರೇಶ್ ನನ್ನ ಪೊಲೀಸರು ಠಾಣೆಗೆ ಕರೆದುಕೊಂಡು ಹೋದರು. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

View this post on Instagram

A post shared by News Karnataka (@newskarnataka)