ಚಿಕ್ಕೊಡಿ : ಕೆಎಸ್ಆರ್ಟಿಸಿ ಬಸ್ ನಲ್ಲಿ ಮಹಿಳೆಯರು ಗಲಾಟೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.
ಬೆಳಗಾವಿ ಗುಡ್ಡಾಪುರ ಬಸ್ ನಲ್ಲಿ ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಬಸ್ ನಲ್ಲಿ ಸೀಟ್ ಗಾಗಿ ಬೈಯ್ದಾಡಿಕೊಂಡು ಮಹಿಳೆಯರು ರಂಪಾಟ ಮಾಡಿದ್ದಾರೆ.
ಬಸ್ ನಿಲ್ಲಿಸಿ ಸಹ ಪ್ರಯಾಣಿಕರು ಜಗಳ ಬಿಡಿಸಿದರು. ಈ ವೇಳೆ ಬಸ್ ಕಂಡಕ್ಟರ್, ಡ್ರೈವರ್ ಗೂ ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

