ಚಿಕ್ಕೋಡಿ : ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ಟೋಲ್ ಸಮೀಪ ಸಂಭವಿಸಿದೆ.

ಇಬ್ಬರು ಪಿಡಿಓಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಂಚಿನಾಳ ಗ್ರಾಮದ ಪಿಡಿಓ ಶಿವಾನಂದ ವಾಸಣ್ಣವರ ಹಾಗೂ ಹತ್ತರಗಿ ಗ್ರಾಮದ ಪಿಡಿಓ ಆನಂದ ಹುಳೆಣ್ಣವರ ಬಚಾವ್ ಆಗಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.