ಳ್ಳಾರಿ: ಹದಿಮೂರು ವರ್ಷದ ಬಳಿಕ‌ ಜನಾರ್ದನ ರೆಡ್ಡಿ ಅವರು ಗುರುವಾರ(ಅ3 )ತವರು ಬಳ್ಳಾರಿಗೆ ಅದ್ದೂರಿ ಪ್ರವೇಶ ಮಾಡಿ ಗಮನಸೆಳೆದಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದ್ದು, ರಾಜಕೀಯ ವಿರೋಧಿಗಳಿಗೆ ದೊಡ್ಡ ಮಟ್ಟದ ಪರಿಣಾಮ ತೋರಿಸುವ ನಿಟ್ಟಿನಲ್ಲಿ ಭರ್ಜರಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಡೂರು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದ್ದು, ರಾಜಕೀಯ ವಿರೋಧಿಗಳಿಗೆ ದೊಡ್ಡ ಮಟ್ಟದ ಪರಿಣಾಮ ತೋರಿಸುವ ನಿಟ್ಟಿನಲ್ಲಿ ಭರ್ಜರಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಜೆಸಿಬಿಯಿಂದ ಬೃಹತ್ ಹಾರ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಿದರು.

ಮಾರ್ಗ ಮಧ್ಯೆ ನಗರ ಹೊರವಲಯದ ಅಲ್ಲೀಪುರ ಮಠದಿಂದಲೇ ದೊಡ್ಡ ಮೆರವಣಿಗೆ ನಡೆಸಲಾಯಿತು. ಹೂಮಳೆ ಸುರಿಸಿ ಅಲ್ಲಿಂದಲೇ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಜನಾರ್ದನ ರೆಡ್ಡಿ ಬರುವ ಮಾರ್ಗ ದಲ್ಲೆಲ್ಲ ಹೂವಿನ ಮಳೆ ಸುರಿಸಲಾಯಿತು.