ಬಳ್ಳಾರಿ:  ಜಿಲ್ಲೆಯ ಸಿರಗುಪ್ಪ ತಾಲೂಕಿನ ದೊಡ್ಡ ರಾಜ್ ಕ್ಯಾಂಪ್‌ನಲ್ಲಿ ಕೌಟುಂಬಿಕ ಕಲಹದ ಹಿನ್ನಲೆ ಪತಿ, ಪತ್ನಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ  ಘಟನೆ ನಡೆದಿದೆ.

ಮೃತರನ್ನು ಪತಿ ಅಂಬರೀಶ್ (24) ಹಾಗೂ ಪತ್ನಿ ಶೃತಿ (20) ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಈ ಜೋಡಿ ಕಳೆದ ಕೆಲ ತಿಂಗಳಿಂದ ಗಲಾಟೆಯಾಡುತ್ತಲೇ ಇದ್ದರು.

ಪ್ರತಿದಿನ ಗಲಾಟೆ, ಕಿತ್ತಾಟದಿಂದ ಬೇಸತ್ತ ಅಂಬರೀಶ್ ಹಾಗೂ ಶೃತಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.