ಬಳ್ಳಾರಿ: ವಡ್ಡು ಗ್ರಾಮದ ಬಾಲಕಿ ರೂಪ ಮೇಲೆ ಅತ್ಯಾಚಾರ ಘಟನೆ ಜನ ಮಾನಸದಿಂದ ಮಾಸುವ ಮುಂಚೆಯೇ ತೋರಣಗಲ್ಲು ಗ್ರಾಮದಲ್ಲಿ ಜನರು ಬೆಚ್ಚಿ ಬೀಳಿಸುವಂತ ಪೈಶಾಚಿಕ ಕೃತ್ಯ ಮತ್ತೊಂದು ನಡೆದಿದೆ. ಇನ್ನೂ ಏನೂ ಅರಿಯದ 4 ವರ್ಷದ ಮುಗ್ಧ ಬಾಲಕಿ ಮೇಲೆ ದುಷ್ಕರ್ಮಿಯ ನೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.
ಈ ಪ್ರಕರಣ ಮತ್ತೊಮ್ಮೆ ತೋರಣಗಲ್ಲ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತೆ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದ್ದು ಭಾರೀ ಆತಂಕ ಜನರಲ್ಲಿ ವ್ಯಕ್ತವಾಗುತ್ತಿದೆ. ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಾರ್ಖಂಡ ಕುಟುಂಬ ಮೂಲದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

ದಿನಾಂಕ 13.01.2025 ಸೋಮವಾರ ರಂದು ಸಂಜೆ 5.00 ಗಂಟೆ ಸುಮಾರಿಗೆ ತಾಲೂಕು ತೋರಣಗಲ್ಲು ರೈಲ್ವೆ ನಿಲ್ದಾಣ ರಸ್ತೆಯ ಬಳಿ ವಠಾರದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಮಗುವನ್ನು ಚಾಕಲೇಟ್ ಜ್ಯೂಸ್ ಆಸೆ ತೋರಿಸಿ ಕರೆದುಕೊಂಡು ಹೋಗಿ ವಿಜಯ ಲಕ್ಷ್ಮಿ ಚಿತ್ರ ಮಂದಿರದ ಕಂಪೌಂಡ್ ಪಕ್ಕ ಪಾಳು ಬಿದ್ದಿರುವ ರೂಮಗಳ ಸಾಲಿನ 3 ನೇ ಕಟ್ಟಡದಲ್ಲಿ ಅತ್ಯಾಚಾರವೆಸಗಿ ಹೊರಗಡೆ ಬಿಟ್ಟು ಹಾಕಿದ್ದು, ಮಗುವಿನ ಅಳುವನ್ನು ಕೇಳಿ ರಕ್ಷಿಸಲಾಗಿದೆ.
ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 65(2)(12 ವರ್ಷದೊಳಗಿನ ಮಹಿಳೆಯ ಅತ್ಯಾಚಾರ) ಮತ್ತು ಲೈಂಗಿಕತೆಯಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೋಕ್ಸೊ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಅತ್ಯಚಾರ ವೆಸಗಿದ ದುಷ್ಕರ್ಮಿ ಮಂಜು ಎಂಬುವನು ವಿವಾಹಿತನಾಗಿದ್ದು ಕಮಾಲಾಪುರ ಮೂಲದ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ತೋರಣಗಲ್ಲು ಕೈಗಾರಿಕಾ ವ್ಯಾಪ್ತಿಗಳಲ್ಲಿ ವ್ಯಾಪಕವಾಗಿ ಅತ್ಯಾಚಾರ, ದೌರ್ಜನ್ಯ , ಕೈಗಾರಿಕೆ ಅಪಘಾತಗಳು, ರಸ್ತೆ ಅಪಘಾತಗಳು, ಸಂಭವಿಸುತ್ತದೆ. ದುಷ್ಕೃತ್ಯ ವ್ಯಸಗಿದ ಅಪರಾಧಿಗಳ ಪರ ನಿಂತು, ಕಾನೂನುಗಳನ್ನು ದಾರಿ ತಪ್ಪಿಸುವ ಸಂಚು ನಡೆಸಿಕೊಂಡು ಬರುವ ಸ್ಥಳೀಯ ದುಷ್ಕರ್ಮಿಗಳು ಇಂತಹ ಘಟನೆಗಳ ದುರ್ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅನೇಕ ಘಟನೆಗಳಿಗೆ ನ್ಯಾಯ ದೊರಕಿರುವುದಿಲ್ಲ. ಕಾನೂನಾತ್ಮಕ ತನಿಖೆ ನಡೆಯದೆ ಶಿಕ್ಷೆಗಳಿಂದ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ವಡ್ಡು ಗ್ರಾಮದಲ್ಲಿ ನಡೆದ ಕುಮಾರಿ ರೂಪ ಎಂಬ ಬಾಲಕಿಯ ಅತ್ಯಾಚಾರದ ನಂತರ ಮತ್ತೊಂದು ತೋರಣಗಲ್ಲು ಗ್ರಾಮದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಅಮಾನವೀಯ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ಯಾಗುವಂತೆ ದೂರನ್ನು ದಾಖಲಿಸಿ ಯಾವುದೇ ರಾಜಕಾರಣಿಗಳ ಪುಡಾರಿಗಳ ಒತ್ತಡಕ್ಕೆ ಮಣಿಯದೆ ತೀವ್ರ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ. ಇಂತಹ ಅಮಾನವೀಯ ಘಟನೆಗಳ ಅಪರಾಧಿಗಳಿಗೆ ರಕ್ಷಿಸುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕೇಳಿಕೊಳ್ಳುತ್ತೇವೆ. ಈ ಕೇಳಗಿನಂತೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ.

ಬೇಡಿಕೆಗಳು
1.ಪಾಳು ಬಿದ್ದಿರುವ ರೂಮ್ ಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಕಾರಣವಾಗಿದ್ದು ಈ ಕೂಡಲೇ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ತೆರವುಗೊಳಿಸಬೇಕು.
2.ಅತ್ಯಾಚಾರ ವೆಸಗಿದ ಕಮಾಲಾಪುರ ಮೂಲದ ಮಂಜು ಎಂಬ ದುರ್ಷ್ಕಿಮಿಯನ್ನು ಈ ಕೂಡಲೇ ಪತ್ತೆ ಹಚ್ಚಿ ಕಾನೂನು ಶಿಸ್ತು ಕ್ರಮ ಜರುಗಿಸಬೇಕು.
3.ಬಾಲಕಿ ಕುಟುಂಬಕ್ಕೆ ಆಸ್ಪತ್ರೆ ಚಿಕಿತ್ಸೆಯ ಖರ್ಚು ವೆಚ್ಚ ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು.
4.ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಸದಂತೆ ಸುರಕ್ಷತೆಗಳನ್ನು C.C.ಕ್ಯಾಮರಾ, ಫಲಕಗಳು ಇತರೇ ವ್ಯವಸ್ಥಿತ ಸಾಧನಗಳನ್ನು ಅಳವಡಿಸಬೇಕು.

