ಬಳ್ಳಾರಿ: ಪರಪ್ಪನ ಅಗ್ರಹಾರದಿಂದ ನಟ ದರ್ಶನ್​ ಬಳ್ಳಾರಿ ಜೈಲಿಗೆ ಶಿಫ್ಟ್​​ ಆಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅಧಿಕಾರಿಗಳು ಸುರಕ್ಷಿತವಾಗಿ ಅವರನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿದ್ದಾರೆ.

9.45ರ ವೇಳೆಗೆ ಬಳ್ಳಾರಿಗೆ ತಲುಪಿಸಿದ ದರ್ಶನ್​ ಇದೀಗ ಕೇಂದ್ರ ಕಾರಾಗೃಹದ ಒಳ ಸೇರಿದ್ದಾರೆ. ಸದ್ಯ ನಟನಿಗೆ ಹೊಸ ಕೈದಿ ನಂಬರ್​ ಕೂಡ ಜೈಲಾಧಿಕಾರಿಗಳು ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ದರ್ಶನ್​ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ದರ್ಶನ್​ಗೆ ಜೈಲಾಧಿಕಾರಿಗಳಿಂದ ಕೈದಿ ನಂಬರ್​ 6106 ನೀಡಿದ್ದರು.

ಆದರೀಗ ಬಳ್ಳಾರಿಗೆ ಶಿಫ್ಟ್​ ಆದ ಬಳಿಕ ಬೇರೆ ನಂಬರ್​ ನೀಡಿದ್ದಾರೆ. ಬಳ್ಳಾರಿ ಜೈಲು ಸೇರಿದ ದರ್ಶನ್​ಗೆ ಕೈದಿ ನಂಬರ್​ 511 ನೀಡಿದ್ದಾರೆ. ಸದ್ಯ ಹೊಸ ನಂಬರ್​ ದರ್ಶನ್​ಗೆ ಸಿಕ್ಕಿದೆ. ಮೊದಲಿಗೆ 6106 ನಂಬರ್​ ಸಿಕ್ಕಿದಾಗ ನಟನ ಅಭಿಮಾನಿಗಳು ಆ ನಂಬರನ್ನು ವಾಹನದ ಮೇಲೆ, ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದರು. ಆದರೀಗ ಮತ್ತೇ ನಂಬರ್‌ ಬದಲಾಗಿದೆ.