ಬಳ್ಳಾರಿ : ಕೌಟುಂಬಿಕ ಕಲಹಕ್ಕೆ ಬಳ್ಳಾರಿಯಲ್ಲಿ ಮತ್ತೆ ಡಬಲ್ ಮರ್ಡರ್ ನಡೆದಿದೆ. ಪತಿಯೇ ಪತ್ನಿ ಹಾಗೂ 7 ತಿಂಗಳ ಮಗುವನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಳ್ಳಾರಿ ನಗರದ ಅಂದ್ರಾಳ್ ಪ್ರದೇಶದಲ್ಲಿ ನಡೆದಿದೆ.

ರಾಜೇಶ್ವರಿ (26) ಹಾಗೂ 7 ತಿಂಗಳ ಹೆಣ್ಣು ಮಗು ಮೃತಪಟ್ಟಿದೆ. ಹೆಂಡತಿ ಹಾಗೂ ಹಸುಕೂಸನ್ನು ಪಾಪಿ ಪತಿ ಕೊಂದಿದ್ದಾನೆ. ಪತಿ ಹೊನ್ನೂರುಸ್ವಾಮಿಯಿಂದ ಕೊಲೆ ಕೃತ್ಯ ನಡೆದಿದೆ.

ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.