ಬಳ್ಳಾರಿ : ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಭೀಕರವಾಗಿ ಪತಿ ಕೊಲೆ ಮಾಡಿದ ಘಟನೆ ಬಳ್ಳಾರಿಯ ಕೌಲ್ ಬಜಾರ್‌ನಲ್ಲಿ ನಡೆದಿದೆ.
ಆಫ್ರೀನ್ ಬಾನು ಕೊಲೆಯಾದ ಮಹಿಳೆ, ನೂರ್ ಅಹ್ಮದ್ ಆರೋಪಿ. ಎರಡು ವರ್ಷಗಳ ಹಿಂದೆ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 8 ತಿಂಗಳ ಗಂಡು ಮಗು ಇದೆ. ಕೌಟುಂಬಿಕ ಕಲಹ ಹಿನ್ನೆಲೆ ಆಫ್ರೀನ್ ತವರು ಮನೆ ಸೇರಿದ್ದರು.
ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಪತ್ನಿಯ ಮನೆಗೆ ಪತಿ ಬಂದಿದ್ದರು. ಕೇಕ್ ಕಟ್ ಮಾಡಿ ಸಂಭ್ರಮಿಸಿದ ಬಳಿಕ ಹೊರಗೆ ಕರೆದುಕೊಂಡು ಹೋಗಿ ಕೃತ್ಯ ನಡೆಸಿದ್ದಾನೆ. ಪಾರ್ಟಿ ನೆಪದಲ್ಲಿ ಕರೆದುಕೊಂಡು ಹೋಗಿ ನೂರ್ ಆಹ್ಮದ್ ಕೊಲೆ ಮಾಡಿದ್ದಾರೆ. ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿ ನೂರ್ ಭೀಕರ ಹತ್ಯೆಗೈದಿದ್ದಾರೆ. ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಪತಿ ಪರಾರಿಯಾಗಿದ್ದಾನೆ.
ಬಳಿಕ ಏನೂ ಆಗಿಲ್ಲವೆಂಬಂತೆ ಪತಿ ಹುಡುಕಾಟದ ನಾಟಕವಾಡಿದ್ದಾನೆ. ಪತ್ನಿ ನಾಪತ್ತೆ ಕುರಿತು ಕುಟುಂಬಸ್ಥರಿಗೆ ಪತಿ ಸುಳ್ಳು ಮಾಹಿತಿ ನೀಡಿದ್ದಾನೆ. ಕುಟುಂಬಸ್ಥರ ಅನುಮಾನದಿಂದ ಪೊಲೀಸರಿಗೆ ದೂರು ನೀಡಲಾಯಿತು. ವಿಚಾರಣೆ ವೇಳೆ ಕೊಲೆ ಸತ್ಯವನ್ನು ಆರೋಪಿ ನೂರ್ ಅಹ್ಮದ್ ಬಾಯ್ಬಿಟ್ಟಿದ್ದಾನೆ. ಕೊಲೆಯಾದ 13 ದಿನಗಳ ಬಳಿಕ ಅಫ್ರೀನ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ನೂರ್ ಅಹ್ಮದ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಬಳ್ಳಾರಿಯಲ್ಲಿ ಪತ್ನಿ ಹತ್ಯೆ ಪ್ರಕರಣ ಸಂಚಲನ ಸೃಷ್ಟಿಸಿದೆ.

