ಬಳ್ಳಾರಿ: ಮೀನು ಹಿಡಿಯುವಾಗ ಫಿಟ್ಸ್‌ ಬಂದು ಮೀನುಗಾರ ನದಿಗೆ ಬಿದ್ದ ಘಟನೆ ಬಳ್ಳಾರಿಯ ಕಂಪ್ಲಿಯಲ್ಲಿ ನಡೆದಿದೆ.

ಕಂಪ್ಲಿ ಕೋಟೆಯ ಬಳಿ ತುಂಗಭದ್ರಾ ನದಿ ತಟದಲ್ಲಿ ಮೀನುಗಾರ ಕರ್ಪಣ್ಣ ಮೀನು ಹಿಡಿಯುವಾಗ ಫಿಟ್ಸ್ ಬಂದಿದೆ. ಈ ವೇಳೆ ಏಕಾಏಕಿ ನದಿಗೆ ಬಿದ್ದಿದ್ದಾರೆ.

ಕೂಡಲೇ ಸ್ಥಳೀಯರು ನದಿಯಲ್ಲಿ ಮುಳುಗಿದ್ದ ಕರ್ಪಣರನ್ನು ಕಂಡು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಂಪ್ಲಿ‌ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಕರೆದುಕೊಂಡು ಹೋಗಿದ್ದಾರೆ.