ಬಾಗಲಕೋಟೆ: ನನ್ನ ರಾಜಕೀಯ ಕ್ಷೇತ್ರವನ್ನು ಪ್ರಾರಂಭದಲ್ಲಿ ಸಹಕಾರಿ ಕ್ಷೇತ್ರದಿಂದ ಆರಂಭಿಸಿದ್ದೆ.ಅದಕ್ಕಾಗಿ ಅಂತಹ ಸಹಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಬರ್ತಿನಿ ಅಂತ ಮಾತು ಕೊಟ್ಡಿದ್ದೆ ಅದಕ್ಕೆ ಬಂದಿದ್ದೇನೆ ಎಂದು ಜಮಖಂಡಿ ನಗರದಲ್ಲಿ ಡಿಸಿಎಮ್ ಡಿಕೆ ಶಿವಕುಮಾರ್ ಹೇಳಿಕೆ‌ ನೀಡಿದ್ದಾರೆ.

ದೆಹಲಿ ಪ್ರಯಾಣ ವಿಶೇಷ ಬಗ್ಗೆ ಹೇಳಿಕೆ ನೀಡಿದ್ದು, ದೆಹಲಿಯಲ್ಲಿ ಕರ್ನಾಟಕ ಭವನ ಉದ್ಘಾಟನೆ ಇದೆ. ಅದಕ್ಕಾಗಿ ಹೊರಟಿದ್ದೇನೆ. ಕೇಂದ್ರ ಸಚಿವರುಗಳನ್ನು ರಾಜನಾಥಸಿಂಗ್ ಅವರನ್ನು ಸೇರಿ ಬೇರೆ ಬೇರೆ ಇಲಾಖೆ ಯವರನ್ನು ಕರೆದಿದ್ದೇವೆ. ಎಮ್ ಎಲ್ ಸಿ ಸೇರಿದಂತೆ ಬೇರೆ ಬೇರೆ ಕೆಲಸಗಳಿವೆ ಅದಕ್ಕೆ ಹೊರಟಿದ್ದೇನೆ ಎಂದರು.

ಸಂಪುಟ ಪುನಾರಚನೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅವರು ಏನು ನಿರ್ಧಾರ ಮಾಡ್ತಾರೊ ಅದು ಆಗುತ್ತದೆ ಎಂದರು. ಹಾಲಿನ ಬೆಲೆ ಏರಿಕೆ ವಿಚಾರ‌ವಾಗಿ ಮಾತನಾಡಿ, ಹಾಲಿನ ದರ ರೈತರು ಬದುಕಬೇಕೊ ಬೇಡ್ವೊ, ರೈತರು ಬದುಕಬೇಕು ಅದಕ್ಕೆ ಏರಿಸಿದ್ದೇವೆ. ನಾವು ಯಾಕೆ ಐದು ಗ್ಯಾರಂಟಿ ಕೊಟ್ಟಿದ್ದೇವೆ ಅಂದರೆ‌. ಜನ ತತ್ತರಿಸ್ತಾ ಇದಾರೆ, ಬೆಲೆಗಳೆಲ್ಲ ಮೇಲಕ್ಕೆ ಹೋಗ್ತಿದಾವೆ. ಅವರನ್ನು ಬದುಕಿಸಬೇಕು ಅಂತ ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದರು.

ವಕ್ಪ್ ಬಿಲ್ ಮಂಡನೆ ವಿಚಾರವಾಗಿ ಮಾತನಾಡಿ, ಈಗಾಗಲೇ ಆ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಬೇಕೊ.ನಮ್ಮ ರಾಷ್ಟ್ರೀಯ ನಾಯಕರು ವ್ಯಕ್ತಪಡಿಸಿದ್ದಾರೆ. ಸಮರ್ಪಕ ಉತ್ತರ ನೀಡದೆ ಡಿಕೆಶಿ ಹೋದರು.