ಬಾಗಲಕೋಟೆ : ಚಾಲಕನ ನಿಯಂತ್ರಣ ತಪ್ಪಿ ಕ್ರೂಜರ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಕ್ರೂಜರ್ ನಲ್ಲಿದ್ದ 15 ಜನ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಇಳಕಲ್ ಹೊರವಲಯದ ಎನ್ ಎಚ್ 50 ರ ಬಳಿ ಕ್ರೂಶರ್ ಅಪಘಾತ ನಡೆದಿದ್ದು, ಹೆದ್ದಾರಿ ರಸ್ತೆಯಲ್ಲಿಯೇ ನಿಯಂತ್ರಣ ತಪ್ಪಿ ಅವಘಡ ನಡೆದಿದೆ. ಕೊಂಡಿಕೊಪ್ಪದಿಂದ ಹುಲಿಜಂತಿ ಮಾಳಿಂಗರಾಯ ಜಾತ್ರೆಗೆ ಕ್ರೂಜರ್ ವಾಹನದಲ್ಲಿ ಜನರು ಹೊರಟಿದ್ದರು.ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದ ಕ್ಯೂಜರ್ ಪಲ್ಟಿಯಾಗಿದೆ.
ಅಪಘಾತದ ತೀವ್ರತೆಗೆ ಕ್ರೂಜರ್ ನ ಮುಂಭಾಗ ನಜ್ಜು ಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಚಾಲಕ ಸೇರಿ ಏಳೆಂಟು ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಗಾಯಾಳುಗಳು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ರಕ್ಷಿಸಲಾಗಿದೆ. ಅಪಘಾತದ ವೇಳೆ ಕೆಲಕಾಲ ಸಂಚಾರ ವ್ಯವಸ್ಥೆಗೆ ತೊಡಕು ಉಂಟಾಗಿತ್ತು.

