Ad

ಇಂದು ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್ ಪ್ರಮಾಣ ವಚನ ಸ್ವೀಕಾರ

ಬಾಂಗ್ಲಾದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಗುರುವಾರ ಜಾರಿಗೆ ಬರಲಿದೆ. ಮುಹಮ್ಮದ್ ಯೂನಸ್ ಅವರು ಗುರುವಾರ ರಾತ್ರಿ 8:00 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಹೇಳಿದ್ದಾರೆ.

ಢಾಕಾ: ಬಾಂಗ್ಲಾದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಗುರುವಾರ ಜಾರಿಗೆ ಬರಲಿದೆ. ಮುಹಮ್ಮದ್ ಯೂನಸ್ ಅವರು ಗುರುವಾರ ರಾತ್ರಿ 8:00 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಹೇಳಿದ್ದಾರೆ.

ಮಧ್ಯಂತರ ಸರ್ಕಾರದ ಸಲಹಾ ಮಂಡಳಿಯು 15 ಸದಸ್ಯರನ್ನು ಒಳಗೊಂಡಿರಬಹುದು ಎಂದು ಸೇನಾ ಮುಖ್ಯಸ್ಥರು ಬಹಿರಂಗಪಡಿಸಿದ್ದಾರೆ. ದೇಶಾದ್ಯಂತ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತಿದೆ. ಇದು ರಾಷ್ಟ್ರದ ಸ್ಥಿರತೆಗೆ ಧನಾತ್ಮಕ ಸಂಕೇತವಾಗಿದೆ ಇದೇ ಸಮಯದಲ್ಲಿ ತಿಳಿಸಿದ್ದಾರೆ.

ಅರ್ಥಶಾಸ್ತ್ರಜ್ಞ ಯೂನಸ್ ಅವರಿಗೆ 2006 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡವರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ನೊಬೆಲ್​ ಶಾಂತಿ ಪ್ರಶಸ್ತಿ ಸಿಕ್ಕಿದೆ. ಇವರು ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್ ಸಹ ಇದೇ ಸಂದರ್ಭದಲ್ಲಿ ಬಹುಮಾನವನ್ನು ಪಡೆದುಕೊಂಡಿತು.

ಯೂನಸ್ ವಿರುದ್ಧ ಭ್ರಷ್ಟಾಚಾರ ಸೇರಿ 150 ಕ್ಕೂ ಹೆಚ್ಚು ಪ್ರಕರಣಗಳಿದೆ. ಆರೋಪ ಸಾಬೀತಾದರೆ ಅವರನ್ನು ವರ್ಷಗಳವರೆಗೆ ಜೈಲಿನಲ್ಲಿಡಬಹುದು. ಆದರೆ ಯೂನಸ್ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ.

Ad
Ad
Nk Channel Final 21 09 2023