ಟರ್ಕಿ: ಸಾಮಾಜಿಕ ಜಾಲತಾಣದ ಪ್ರಭಾವಿಯೊಬ್ಬರು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.ಟರ್ಕಿ ದೇಶದ ಸೋಶಿಯಲ್ ಮೀಡಿಯಾ ಪ್ರಭಾವಿ ಕುಬ್ರಾ ಆಯ್ಕುತ್ (26) ಟರ್ಕಿಯ ಸುಲ್ತಾನ್‌ಬೇಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್‌ಮೆಂಟ್ ನ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಸೆ.23ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿಗಳಿಗೆ ಘಟನಾ ಸ್ಥಳದಲ್ಲಿ ಪತ್ರವೊಂದು ಸಿಕ್ಕಿರುವುದಾಗಿ ವರದಿಯಾಗಿದೆ. ಕುಬ್ರಾ ಸಾವಿಗೆ ಕೆಲವೇ ಗಂಟೆಗಳ ಮೊದಲು ತನ್ನ ಖಾತೆಯಲ್ಲಿ ತೂಕ ಹೆಚ್ಚಾಗಿ ಅದರೊಂದಿಗೆ ಜೀವನ ಕಳೆಯುವುದರ ಬಗೆಗಿನ ಕುರಿತ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ಅವರ ಫಾಲೋವರ್ಸ್ ಕಳವಳ ವ್ಯಕ್ತಪಡಿಸಿದ್ದರು.
ಕುಬ್ರಾ 2023 ರಲ್ಲಿ ಟಿಕ್‌ಟಾಕ್‌ನಲ್ಲಿ ತನ್ನ ವಿಶಿಷ್ಟ ಕಂಟೆಂಟ್ ನಿಂದ ಗಮನ ಸೆಳೆದಿದ್ದರು.”ವೆಡ್ಡಿಂಗ್ ವಿತ್ ಔಟ್ ಎ ಗ್ರೂಮ್”(ವರನಿಲ್ಲದೆ ಮದುವೆ) ಸರಣಿಯ ವಿಡಿಯೋಗಳಿಂದ ಖ್ಯಾತಿ ಆಗಿದ್ದರು. ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದ್ದರು. ಕುಬ್ರಾ ಸಾಂಕೇತಿಕವಾಗಿ ತನ್ನನ್ನು ತಾನೇ ಮದುವೆಯಾಗಿದ್ದರು.