ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಾಗಿ 2024ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ದಕ್ಷಿಣ ಕೊರಿಯಾದ ಪ್ರಸಿದ್ಧ ಲೇಖಕಿ ಹಾನ್ ಕಾಂಗ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಸಾಹಿತ್ಯ ಕುಟುಂಬದಿಂದಲೇ ಬೆಳೆದು ಬಂದಿರುವ ಹಾನ್ ಕಾಂಗ್ ಅವರು ಪ್ರಶಸ್ತಿ ಒಲಿದು ಬಂದ ಹಿನ್ನೆಲೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕಾವ್ಯ ರಚನೆ, ಕಥೆ, ಕಾದಂಬರಿಗಳ ಬರಹದಲ್ಲಿ ಸದಾ ಚಟುವಟಿಕೆಯಿಂದ ಇರುವ 53 ವರ್ಷದ ಲೇಖಕಿ ಹಾನ್ ಕಾಂಗ್ ಅವರಿಗೆ 2024ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ರಾಯಲ್ ಸ್ವಿಡಿಷ್ ಅಕಾಡೆಮಿ ತಿಳಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆಯುವ ಏಷ್ಯಾದ ಹಾಗೂ ದಕ್ಷಿಣ ಕೊರಿಯಾದ ಮೊಟ್ಟ ಮೊದಲ ಮಹಿಳೆ ಹಾನ್ ಕಾಂಗ್ ಆಗಿದ್ದಾರೆ.
ಬರವಣಿಗೆಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದರು. ಇವರ ತಂದೆ ಕೂಡ ಪ್ರಸಿದ್ಧ ಕಾದಂಬರಿಕಾರ ಆಗಿದ್ದರು. ಹೀಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಲು ಹಾನ್ ಕಾಂಗ್ಗೆ ಸುಲಭವಾಯಿತು. ಪ್ರಸ್ತುತ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಇವರು ವಾಸಿಸುತ್ತಿದ್ದಾರೆ.