ಫೋರಿಡಾ: ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದಿದ್ದು ಉದ್ದೇಶಿತ ಹತ್ಯೆ ಯತ್ನ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸ್ಪಷ್ಟಪಡಿಸಿದೆ. ಹಾಗೆಯೇ 58 ವರ್ಷದ ಗನ್ಮ್ಯಾನ್ ರಿಯಾನ್ ರೌತ್ ಉಕ್ರೇನ್ ಬೆಂಬಲಿಗ ಎನ್ನುವ ಮಾಹಿತಿ ಲಭ್ಯವಾಗಿದೆ.
ರಷ್ಯಾದ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಹೋರಾಡಲು ಕೈವ್‌ಗೆ ಹೋಗಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ಅಧಿಕಾರಿಗಳು AK-47-ಶೈಲಿಯ ಆಕ್ರಮಣಕಾರಿ ರೈಫಲ್, ಸ್ಕೋಪ್, ಎರಡು ಬ್ಯಾಕ್‌ಪ್ಯಾಕ್‌ಗಳು ಮತ್ತು ಕೆಲವು ಸಾಧನವನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಕ್ಯಾಲಿಫೋರ್ನಿಯಾದ ನಿವಾಸಿಯಾಗಿರು ಈತ ಅಪರಾದ ಹಿನ್ನಲೆ ಹೊಂದಿದ್ದಾನೆ. ರಾಜಕೀಯದ ಬಗ್ಗೆ ಅತಿಯಾಗಿ ಮಾತನಾಡುವ ಈತ ಉಕ್ರೇನ್‌ನ್ನು ಮತ್ತು ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ.
Ad