News Karnataka Kannada
Wednesday, April 24 2024
Cricket
ವಿದೇಶ

ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ದೊರೆತ ನಿಗೂಢ ವಸ್ತುವಿನ ಕುರಿತು ಇಸ್ರೋ ಹೇಳಿದ್ದೇನು ?

What did ISRO say about the mysterious object found off the coast of Australia?
Photo Credit : News Kannada

ಚೆನ್ನೈ: ಪಶ್ಚಿಮ ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಲೋಹದ ಸಿಲಿಂಡರ್ ಒಂದು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ರಾಕೆಟ್‌ನ ಭಾಗವೇ ಎಂಬುದನ್ನು ಸಂಸ್ಥೆ ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಹೇಳಿದೆ.

ನಾವು ವಸ್ತುವನ್ನು ಖುದ್ದಾಗಿ ನೋಡದೆ ಮತ್ತು ಪರಿಶೀಲಿಸದೆ ಅದರ ಬಗ್ಗೆ ಏನನ್ನೂ ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ. ಮೊದಲು ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ವಸ್ತುವಿನ ವೀಡಿಯೊವನ್ನು ಕಳುಹಿಸಬೇಕು. ಅದರಲ್ಲಿ ನಮ್ಮ ಪಿಎಸ್‌ಎಲ್‌ವಿ ಗುರುತುಗಳಿವಿಯೇ ಎಂದು ನೋಡಬೇಕು. ಅಗತ್ಯವಿದ್ದರೆ, ಅದು ಭಾರತೀಯ ರಾಕೆಟ್‌ಗೆ ಸೇರಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇಸ್ರೋ ಅಧಿಕಾರಿಗಳು ತೆರಳುತ್ತಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ದಡದಲ್ಲಿ ಸಿಕ್ಕಿರುವ ಬೃಹತ್ ಲೋಹೀಯ ವಸ್ತು ಭಾರತದ ಪಿಎಸ್‌ಎಲ್‌ವಿ ರಾಕೆಟ್‌ನ ಭಾಗವೇ ಎಂಬ ಊಹಾಪೋಹಗಳು ಬಾಹ್ಯಾಕಾಶ ಕ್ಷೇತ್ರದ ಅಧಿಕಾರಿಗಳಲ್ಲಿ ಹರಿದಾಡುತ್ತಿವೆ.

ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಸಂಪರ್ಕಿಸಿದೆ ಎಂದು ಇಸ್ರೋ ಅಧಿಕಾರಿ ತಿಳಿಸಿದ್ದಾರೆ.

ಚಿತ್ರ ವಿಚಿತ್ರ ವಿಶ್ಲೇಷಣೆ: ಪಶ್ಚಿಮ ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಲೋಹದ ಸಿಲಿಂಡರ್ ಒಂದು ಪತ್ತೆಯಾದ ಬಳಿಕ ಜನರೂ ಕೂಡಾ ಚಿತ್ರ ವಿಚಿತ್ರ ರೀತಿಯ ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ಕೆಲವರು ಈ ವಸ್ತುವನ್ನು ಅನ್ಯ ಗ್ರಹ ಜೀವಿಗಳ ವಾಹನ ಯುಎಫ್‌ಒ ಇರಬಹುದೇ ಎಂದೂ ಊಹಿಸುತ್ತಿದ್ದಾರೆ. ಇನ್ನೂ ಕೆಲವರು ಕೆಲ ವರ್ಷಗಳ ಹಿಂದೆ ಸಮುದ್ರದ ಮೇಲೆ ಹಾರುತ್ತಿದ್ದಾಗ ನಾಪತ್ತೆಯಾಗಿದ್ದ ಮಲೇಷ್ಯಾದ ವಿಮಾನದ ಬಿಡಿ ಭಾಗ ಇರಬಹುದೇ ಎನ್ನುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಬೃಹತ್ ಗಾತ್ರದ ಲೋಹದ ವಸ್ತುವಿನ ಮೂಲವೇನು ಎಂಬ ಕುರಿತಾಗಿ ತನಿಖೆ ನಡೆಯುತ್ತಿದೆ. ಹೀಗಾಗಿ, ಯಾವುದೇ ನಿರ್ಧಾರಕ್ಕೆ ಈಗಲೇ ಬರಲಾಗದು ಎಂದು ಪಶ್ಚಿಮ ಆಸ್ಟ್ರೇಲಿಯಾ ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನರು ಈ ನಿಗೂಢ ವಸ್ತುವಿನ ಬಳಿ ಬಾರದಂತೆ ತಡೆಯಲು ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು