ಬೈರುತ್: ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಲೆಬನಾನ್‌ನಲ್ಲಿ ಒಂದೇ ಬಾರಿಗೆ 1 ಸಾವಿರಕ್ಕೂ ಅಧಿಕ ಪೇಜರ್‌ಗಳನ್ನು ಸ್ಫೋಟಿಸಿದ್ದ ಬೆನ್ನಲ್ಲೇ ಬುಧವಾರ ಮತ್ತೆ 3 ಸಾವಿರ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ವಾಕಿಟಾಕಿ, ವೈರ್‌ಲೆಸ್ ರೇಡಿಯೋ ಗಳನ್ನು ಸ್ಫೋಟಿಸಲಾಗಿದೆ. ಈ ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪೇಜರ್‌ಗಳನ್ನು ಖರೀದಿಸಿದ್ದ ಸಂದರ್ಭದಲ್ಲೇ ಈ ವಾಕಿ-ಟಾಕಿ ಮತ್ತು ರೇಡಿಯೋಗಳನ್ನೂ ಖರೀದಿಸಲಾಗಿತ್ತು ಎನ್ನುವ ಮಾಹಿತಿ ಹೊರಬಿದ್ದಿದ್ದು, ಲೆಬನಾನ್ ಜನರಲ್ಲಿ ಘಟನೆ ಆತಂಕ ಹೆಚ್ಚಿಸಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬೈರೂತ್, ಬೈಕಾ ವ್ಯಾಲಿ ಹಾಗೂ ದಕ್ಷಿಣ ಲೆಬನಾನ್‌ನಲ್ಲಿ ವಾಕಿ-ಟಾಕಿ ಮತ್ತು ವೈರ್‌ಲೆಸ್ ರೇಡಿಯೋಗಳು ಸ್ಫೋಟಗೊಂಡಿವೆ. ಹಲವು ಪ್ರದೇಶಗಳಲ್ಲಿ ಮನೆಯ ಸೌರಶಕ್ತಿ ವ್ಯವಸ್ಥೆಗಳೂ ಸ್ಫೋಟಗೊಂಡಿವೆ ಎನ್ನಲಾಗಿದೆ. ಮಂಗಳವಾರ ನಡೆದಿದ್ದ ಪೇಜರ್ ಸ್ಫೋಟದಿಂದ 12 ಮಂದಿ ಮೃತಪಟ್ಟಿದ್ದರು. ಈಗ ಈ ಘಟನೆಯನ್ನೂ ಹೆಜ್ಜುಲ್ಲಾ ನಾಯ ಕರು ಇಸ್ರೇಲ್ ನಡೆಸಿದೆ ಎಂದು ಆರೋಪಿಸಿದ್ದಾರೆ.ಅಂತ್ಯಸಂಸ್ಕಾರದ ವೇಳೆಯೇ ಸ್ಫೋಟ
ಮಂಗಳವಾರ ಪೇಜರ್ ಸ್ಫೋಟ ದಿಂದ ಮೃತಪಟ್ಟ ಹೆಜ್ಬುಲ್ಲಾ ಸಂಘ ಟನೆಯ ನಾಲ್ವರ ಅಂತಿಮ ಸಂಸ್ಕಾರ ಬೈರೂತ್‌ನಲ್ಲಿ ನಡೆಯುತ್ತಿತ್ತು. ಈ ವೇಳೆಯೇ ವಾಕಿ-ಟಾಕಿಗಳು ಸ್ಫೋಟಗೊಂಡಿವೆ. ಹಲವರು ಗಾಯಗೊಂಡಿದ್ದು, ಜಾಲತಾಣಗಳಲ್ಲೂ ಈ ವೀಡಿಯೋ ವೈರಲ್ ಆಗಿದೆ.
ಮಂಗಳವಾರ ಪೇಜರ್ ಸ್ಫೋಟ ದಿಂದ ಮೃತಪಟ್ಟ ಹೆಜ್ಬುಲ್ಲಾ ಸಂಘ ಟನೆಯ ನಾಲ್ವರ ಅಂತಿಮ ಸಂಸ್ಕಾರ ಬೈರೂತ್‌ನಲ್ಲಿ ನಡೆಯುತ್ತಿತ್ತು. ಈ ವೇಳೆಯೇ ವಾಕಿ-ಟಾಕಿಗಳು ಸ್ಫೋಟಗೊಂಡಿವೆ. ಹಲವರು ಗಾಯಗೊಂಡಿದ್ದು, ಜಾಲತಾಣಗಳಲ್ಲೂ ಈ ವೀಡಿಯೋ ವೈರಲ್ ಆಗಿದೆ.
Ad